ಮೈಸೂರು

ಗಂಗೋತ್ರಿ ಪಬ್ಲಿಕ್ ಶಾಲೆ, ಪದವಿ ಪೂರ್ವ ಕಾಲೇಜಿನಲ್ಲಿ ಸಂಭ್ರಮದ ‘ಸಂಕ್ರಾಂತಿ’ ಆಚರಣೆ

ಮೈಸೂರು, ಜ.14:-ನಗರದ ಬೋಗಾದಿ ಮುಖ್ಯ ರಸ್ತೆ, ಚರ್ಚ್ ಅಡ್ಡ ರಸ್ತೆಯಲ್ಲಿರುವ ಗಂಗೋತ್ರಿ ಪಬ್ಲಿಕ್ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಇಂದು “ಸಂಕ್ರಾಂತಿ ಹಬ್ಬವನ್ನು” ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಮಕ್ಕಳಿಗೆಲ್ಲಾ ಆರತಿ ಮಾಡಿ, ಶಿಕ್ಷಕ ವೃಂದದವರೆಲ್ಲಾ ಎಳ್ಳು ಬೆಲ್ಲವನ್ನು ಒಬ್ಬರಿಗೊಬ್ಬರು ಹಂಚಿಕೊಂಡು, ಮಾಗಿ ಉತ್ಸವದ ರೀತಿಯಲ್ಲಿ ಆಚರಿಸಿದರು.

ಶಿಕ್ಷಕರು ಸಂಕ್ರಾಂತಿ ಹಬ್ಬದ ಮಹತ್ವವನ್ನು ತಿಳಿಸುತ್ತ ಪುಷ್ಯ ಮಾಸದಲ್ಲಿ ಜನವರಿ ತಿಂಗಳಲ್ಲೇ ಆಚರಿಸುವುದು, ಹಾಗೂ ಹಳ್ಳಿಯಲ್ಲಿ ಜಾನುವಾರುಗಳಿಗೆ ಕಿಚ್ಚು ಹಾಕಿ, ಹೊಸ ಬೆಳೆಗಳಿಗೆ ಪೂಜೆ ಸಲ್ಲಿಸಿ ಹಬ್ಬ ಆಚರಿಸುತ್ತಾರೆ. ಹಾಗೆಯೇ ಎಳ್ಳು, ಕೊಬ್ಬರಿ, ಬೆಲ್ಲ, ಜೀರಿಗೆ ಸೇವಿಸುವುದರಿಂದ  ಈ ಚಳಿಗಾಲದಲ್ಲಿ ನಮ್ಮ ಚರ್ಮದ ಒಣಗುವಿಕೆ ಕಡಿಮೆಯಾಗಿ ದೇಹಕ್ಕೆ ಎಣ್ಣೆ ಅಂಶ ಸೇರಲಿದೆ ಎಂಬುದಾಗಿ ತಿಳಿಸಿದರು. ಭೀಷ್ಮಾಚಾರ್ಯರು ಕುರುಕ್ಷೇತ್ರ ಯುದ್ಧದಲ್ಲಿ ತಮ್ಮ ಪ್ರಾಣ ಬಿಟ್ಟಿದ್ದು ಇದೇ ಉತ್ತರಾಯಣ ಕಾಲದ ಸಂಕ್ರಾಂತಿಯಲ್ಲಿಯೇ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತಾಧಿಕಾರಿಯಾದ   ಕಾಂತಿನಾಯಕ್, ಮುಖ್ಯ ಶಿಕ್ಷಕಿಯಾದ   ಝರೀನಾ ಬಾಬುಲ್, ಶಿಕ್ಷಕ ವೃಂದದವರು ಹಾಗೂ ಕಾರ್ಯಕ್ರಮದ ಕೇಂದ್ರಬಿಂದುಗಳಾದ ಮಕ್ಕಳು  ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: