ಮನರಂಜನೆ

ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ನಟ ನಿತೀನ್

ಹೈದರಾಬಾದ್,ಜ.14-ತೆಲುಗಿನ ನಟ ನಿತೀನ್ ತಮ್ಮ ಬಹುಕಾಲದ ಗೆಳತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ನಿತೀನ್ ಅವರ ವಿವಾಹ ಏಪ್ರಿಲ್ 16 ರಂದು ದುಬೈನಲ್ಲಿ ನಡೆಯಲಿದೆ. ಒಂದು ದಿನದ ಮುಂಚೆ ಏಪ್ರಿಲ್ 15 ರಂದು ಪ್ರೀ ವೆಡ್ಡಿಂಗ್ ಸಮಾರಂಭ ಆಯೋಜಿಸಿದ್ದಾರಂತೆ.

ನಿತೀನ್ ಸುಮಾರು ನಾಲ್ಕೈದು ವರ್ಷದಿಂದ ಶಾಲಿನಿ ಎಂಬವರೊಂದಿಗೆ ಸ್ನೇಹ ಹೊಂದಿದ್ದಾರೆ. ಇದೀಗ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಸಂಗೀತ ಕಾರ್ಯಕ್ರಮವನ್ನು ದುಬೈನಲ್ಲೇ ಆಯೋಜಿಸಲಾಗಿದೆ. ಮದುವೆಯಾದ ಸ್ವಲ್ಪ ದಿನದ ಬಳಿಕ ಹೈದರಾಬಾದ್ ನಲ್ಲಿ ಅದ್ಧೂರಿಯಾಗಿ ಆರತಕ್ಷತೆ ನಡೆಯಲಿದೆ.

ಇಬ್ಬರ ಮನೆಯವರು ಪ್ರೀತಿಗೆ ಸಮ್ಮತಿಸಿದ್ದು, ಈಗಾಗಲೇ ಎರಡು ಕುಟುಂಬದವರು ಮದುವೆಗಾಗಿ ಎಲ್ಲ ತಯಾರಿ ಆರಂಭಿಸಿದ್ದಾರೆ. ದುಬೈನಲ್ಲಿ ಹೋಟೆಲ್ ಕೂಡ ಬುಕ್ ಆಗಿದೆ.

ಸದ್ಯ ನಿತೀನ್ ಅಭಿನಯದ ಭೀಷ್ಮ ಸಿನಿಮಾ ಫೆಬ್ರವರಿ 21 ರಂದು ತೆರೆ ಕಾಣಲಿದೆ. ನಿತೀನ್ ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ. ಅನಂತ್ ನಾಗ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಸಿನಿಮಾಗೆ ವೆಂಕಿ ಕುಡುಮುಲಾ ಆ್ಯಕ್ಷನ್ ಕಟ್ ಹೇಳಿದ್ದಾರೆ. (ಎಂ.ಎನ್)

Leave a Reply

comments

Related Articles

error: