ಮೈಸೂರು

‘ಜಲ ವಿಜ್ಞಾನ  ಸಂಶೋಧನೆಗೆ`ಗ್ರೇಕಾಲರ್ಡ್’ ಮಾರ್ಗಅನುಸರಿಸುವುದು ಇಂದಿನ ಅಗತ್ಯವಾಗಿದೆ’: ಡಾ.ಲಕ್ಷ್ಮಣ್ ನಂದಗಿರಿ   

ಮೈಸೂರು, ಜ.14:- ದೇಶದಲ್ಲಿ ಅಗ್ರಮಾನ್ಯ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಒಂದಾಗಿರುವ ದಿ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್‍ಇಂಜಿನಿಯರಿಂಗ್(ಎನ್‍ಐಇ), `ಇಳಿಮೇಡು ಜಲವಿಜ್ಞಾನ ಮತ್ತುಕ್ಷೇತ್ರ ಸಂಶೋಧನೆ’ ಕುರಿತ ಮೂರು ದಿನಗಳ ಕಾರ್ಯಾಗಾರವನ್ನು ಮೈಸೂರಿನಲ್ಲಿ ಆಯೋಜಿಸಿತ್ತು.

ಈ ಕಾರ್ಯಾಗಾರವನ್ನು ಸಂಸ್ಥೆಯ ಸಿವಿಲ್ ಇಂಜಿನಿಯರಿಂಗ್ ವಿಭಾಗವು ಆಯೋಜಿಸಿದ್ದು,ವಿಶ್ವಬ್ಯಾಂಕ್‍ನಿಧಿ ನೆರವಿನಡಿ  ಪ್ರಾಯೋಜಕತ್ವ ಹೊಂದಿತ್ತು.  ಮೂರು ದಿನಗಳ ಕಾರ್ಯಾಗಾರವನ್ನುಕರ್ನಾಟಕದ ಸುರತ್ಕಲ್‍ನಲ್ಲಿರುವ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್‍ಟೆಕ್ನಾಲಜಿಯ ಮಾಜಿ ಡೀನ್ ಮತ್ತು ಪ್ರೊಫೆಸರ್‍ ಡಾ..ಲಕ್ಷ್ಮಣ್ ನಂದಗಿರಿ   ಉದ್ಘಾಟಿಸಿದರು. ಜಲ ವಿಜ್ಞಾನ ಸಂಶೋಧನಾ ಕ್ಷೇತ್ರವನ್ನು ಜನಪ್ರಿಯಗೊಳಿಸುವ ಮತ್ತು ಪ್ರೋತ್ಸಾಹಿಸುವ ಉದ್ದೇಶವನ್ನು ಈ ಕಾರ್ಯಾಗಾರ ಹೊಂದಿತ್ತು.  ಕಾರ್ಯಕ್ರಮದ ಮೊದಲ ದಿನ ಎನ್‍ಐಇಕ್ಯಾಂಪಸ್‍ನಲ್ಲಿ ಹಲವಾರು ಉಪನ್ಯಾಸಗಳ ಸರಣಿಯನ್ನು `ಇಳಿಮೇಡು ಜಲವಿಜ್ಞಾನದಲ್ಲಿಸಂಶೋಧನೆ’ ವಿಷಯದಲ್ಲಿ ಸಾದರಪಡಿಸಲಾಗಿತ್ತು. ಕೊಡಗಿನಲ್ಲಿ ಎನ್‍ಐಇ ಅಭಿವೃದ್ದಿಪಡಿಸಿದ “ಕುಮಾರಧಾರ ಕ್ಷೇತ್ರ ಜಲವಿಜ್ಞಾನ ಪ್ರಯೋಗಾಲಯ”ಮತ್ತುಗುಂಡ್ಲುಪೇಟೆ ಬಳಿ ಐಐಎಸ್‍ಸಿ ಅಭಿವೃದ್ದಿ ಪಡಿಸಿದ `ಬೇರಮ್‍ಬಾಡಿ’ ಪ್ರಯೋಗಾಲಯಗಳಲ್ಲಿ ಕ್ಷೇತ್ರತರಬೇತಿಯನ್ನು 2ನೇ ಮತ್ತು 3ನೇ ದಿನ ನಡೆಸಲಾಯಿತು.

ಪ್ರಾಸ್ತಾವಿಕ ಭಾಷಣವನ್ನು ಮಾಡಿದ ಡಾ. ನಂದಗಿರಿ  ಮಾತನಾಡಿ, “ಜಲವಿಜ್ಞಾನದಜ್ಞಾನ ವಿಸ್ತರಣೆಗಾಗಿ ಸಂಶೋಧನೆ ಕೈಗೊಳ್ಳುವಲ್ಲಿ ಈಗ `ಗ್ರೇಕಾಲರ್ಡ್’ ಮಾರ್ಗವನ್ನು(ಪ್ರಾಯೋಗಿಕಕ್ಷೇತ್ರ ಸಂಶೋಧನೆ)ಅನುಸರಿಸಬೇಕಿದೆ.ದೈಹಿಕ ಶ್ರಮಇಲ್ಲದ `ಬ್ಲೂಕಾಲರ್ಡ್ ಮಾರ್ಗ’ಕ್ಕಿಂತಲೂ ಅನುಭವಿ ಶ್ರಮ ಹಾಕುವ ಮಾರ್ಗವನ್ನು ಸಂಶೋಧನೆಯಲ್ಲಿ ಅನುಸರಿಸಬೇಕು’’ ಎಂದರು.

“ಕಂಪ್ಯೂಟಿಂಗ್ ಟೂಲ್‍ಗಳು, ಮುಕ್ತ ಮೂಲದ ಸಾಫ್ಟ್ ವೇರ್‍ಗಳು ಹೆಚ್ಚಾಗಿ ಎಲ್ಲೆಡೆ ಹರಡಿರುವುದು ಮತ್ತು ಮಾಹಿತಿ ಬೆರಳ ತುದಿಯಲ್ಲಿ ಲಭ್ಯವಿರುವುದರಿಂದ ಜಲವಿಜ್ಞಾನದ  ಸಂಶೋಧನೆ ಇಂದು ಸಾಮಾನ್ಯವಾಗಿ ಕಂಪ್ಯೂಟರ್ ಕೇಂದ್ರಗಳಿಗೆ ಮೀಸಲಾಗಿ ಉಳಿದಿದ್ದು, ಜಲವಿಜ್ಞಾನದ ಕ್ಷೇತ್ರ ಸಂಶೋಧನೆ ಈಗ ನಶಿಸುತ್ತಿರುವ ಕಲೆಯಾಗಿದೆ. ಇದರಿಂದ ತಳಮಟ್ಟದ ವಾಸ್ತವತೆಗಳಿಗೆ ತೆರೆದುಕೊಳ್ಳುವಲ್ಲಿ ವಿದ್ಯಾರ್ಥಿಗಳು ವಿಫಲರಾಗಿದ್ದಾರೆ. ಗಣಿತದ ಮಾದರಿಗಳು ಮತ್ತು ಸಾಫ್ಟ್  ವೇರ್ ಫಲಿತಾಂಶಗಳ ಗುಣಮಟ್ಟವನ್ನುವಿಸ್ತರಿಸಬಹುದು.  ಆದರೆ ಸೂಕ್ಷ್ಮ ಅಳತೆಯಲ್ಲಿ ವಿಷಯಗಳನ್ನು ಸಂಗ್ರಹಿಸಲು ಕ್ಷೇತ್ರದಲ್ಲಿನ ತನಿಖೆಗಳು ಅಗತ್ಯವಿರುತ್ತವೆ. ಇವುಗಳ ವಿಶ್ಲೇಷಣೆ ಜ್ಞಾನವನ್ನು ವಿಸ್ತರಿಸುತ್ತದೆ. ಆದ್ದರಿಂದ ಈ ಕ್ಷೇತ್ರವನ್ನು ಪ್ರೋತ್ಸಾಹಿಸಿ ಪ್ರಚಾರ ಮಾಡುವುದು ಅಗತ್ಯವಾಗಿದೆ  ಎಂದರು.

ರಾಜ್ಯದ ಸಿವಿಲ್ ಇಂಜಿನಿಯರಿಂಗ್ ಬೋಧನಾ ಸಿಬ್ಬಂದಿಗಳುಹಾಗೂ ಪಿಎಚ್.ಡಿ. ಸ್ಕಾಲರ್‍ಗಳು ಮತ್ತು ಎಂ.ಟೆಕ್. ವಿದ್ಯಾರ್ಥಿಗಳು ಸೇರಿದಂತೆ  50ಕ್ಕೂ ಹೆಚ್ಚಿನ ನಿಯೋಗಿಗಳು ಕಾರ್ಯಾಗಾರದಲ್ಲಿ ಹಾಜರಿದ್ದರು.

ಎನ್‍ಐಇ, ಎನ್‍ಐಎಚ್ ಬೆಳಗಾವಿ ಮತ್ತು ಐಐಎಸ್‍ಸಿ ಬೆಂಗಳೂರುಗಳ ಸಂಪನ್ಮೂಲ ವ್ಯಕ್ತಿಗಳು ಕಾರ್ಯಾಗಾರದ ಸಂದರ್ಭದಲ್ಲಿತರಬೇತಿ ನೀಡಿದರು. ಉತ್ಸಾಹಿಗಳಿಗೆ ಇದುಸಂಶೋಧನೆಯಲ್ಲಿನ ಒಳನೋಟಗಳನ್ನು ಕಲಿತುಕೊಳ್ಳಲು ಅತ್ಯುತ್ತಮ ವೇದಿಕೆಯನ್ನು ಪೂರೈಸಿತ್ತು.  (ಜಿ.ಕೆ,ಎಸ್.ಎಚ್)

 

Leave a Reply

comments

Related Articles

error: