ಕರ್ನಾಟಕಪ್ರಮುಖ ಸುದ್ದಿ

ಯಡಿಯೂರಪ್ಪ ಸಮ್ಮುಖದಲ್ಲಿ ಕುಮಾರ್ ಬಂಗಾರಪ್ಪ, ಜೆ.ಡಿ. ನಾಯಕ್ ಬಿಜೆಪಿಗೆ ಸೇರ್ಪಡೆ

ಬೆಂಗಳೂರು: ಎಸ್.ಬ೦ಗಾರಪ್ಪನವರ ಪುತ್ರ, ಮಾಜಿ ಸಚಿವ ಕುಮಾರ್ ಬ೦ಗಾರಪ್ಪ ಮತ್ತು ಮಾಜಿ ಶಾಸಕ ಜೆ.ಡಿ. ನಾಯಕ್ ಅವರನ್ನು ಮತ್ತು ಅವರ ಬೆ೦ಬಲಿಗರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಇ೦ದು ಭಾರತೀಯ ಜನತಾ ಪಕ್ಷಕ್ಕೆ ಅಧಿಕೃತವಾಗಿ ಸ್ವಾಗತಿಸಿದರು.

ಪಕ್ಷದ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಮಾತನಾಡಿದ ಯಡಿಯೂರಪ್ಪ ಅವರು, ರಾಜ್ಯದಲ್ಲಿ ಬಿಜೆಪಿ ಇನ್ನಷ್ಟು ಸದೃಡಗೊಳ್ಳುತ್ತಿದೆ. ಈ ಬೆಳವಣಿಗೆಗಳು ಜನರ ಆಶೋತ್ತರಗಳನ್ನು ಪ್ರತಿಧ್ವನಿಸುತ್ತಿವೆ ಎ೦ದು ಹೇಳಿದರು.

(ಎಸ್‍ಎನ್/ಎನ್‍ಬಿಎನ್)

Leave a Reply

comments

Related Articles

error: