ಮೈಸೂರು

ಮೈಸೂರು ವಲಯದ ಭಾರತೀಯ ಗೋಪರಿವಾರ-ಹನುಮಂತೋತ್ಸವ ಸಮಿತಿ ವತಿಯಿಂದ ಸಂಕ್ರಾಂತಿ ಆಚರಣೆ ; ಗೋಪೂಜೆ

ಮೈಸೂರು,ಜ.15:-  ಶ್ರೀರಾಮಚಂದ್ರಾಪುರ ಮಠದ ಮೈಸೂರು ವಲಯದ ಭಾರತೀಯ ಗೋಪರಿವಾರ ಮತ್ತು ಮೈಸೂರು ಹನುಮಂತೋತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿಂದು ಕೋಟೆ ಆಂಜನೇಯ ದೇವಸ್ಥಾನದ ಎದುರು  ಸಂಕ್ರಾಂತಿ ಹಬ್ಬವನ್ನು ಸಂಭ್ರಮ-ಸಡಗರಗಳಿಂದ ಆಚರಿಸಲಾಯಿತು, ವಿದೇಶಿ ಯೋಗ ವಿದ್ಯಾರ್ಥಿಗಳು ಪಾಲ್ಗೊಂಡು ಧಾನ್ಯ ಪೂಜೆ, ಗೋಪೂಜೆ ಮಾಡಿದ್ದು ವಿಶೇಷವಾಗಿತ್ತು.

ನಗರ ವಾಸಿಗಳಾಗಿ ಗ್ರಾಮೀಣ ಸೊಗಡನ್ನು ಕಳೆದುಕೊಂಡು ಯಾಂತ್ರಿಕವಾಗಿ ಸಂಕ್ರಾಂತಿ ಆಚರಿಸುತ್ತಿರುವ ಜನರಿಗೆ ಮತ್ತು ವಿದೇಶೀಯರಿಗೂ ನಮ್ಮ ಶ್ರೀಮಂತ ಸಂಸ್ಕೃತಿಯ ಪರಿಚಯವನ್ನು ಮಾಡಿಕೊಡುವ ಸಲುವಾಗಿ ವಿಶೇಷವಾದ ವೇದಿಕೆಯನ್ನು ನಿರ್ಮಿಸಿ ಭತ್ತದ ಕಣ, ನೇಗಿಲು, ಬಂಡಿಗಳನ್ನು ಇರಿಸಿ ಸಿಂಗರಿಸಲಾಗಿತ್ತು. ಹಳ್ಳಿ ಕಾರ್‌  ದನಗಳನ್ನು ಸಿಂಗರಿಸಿ ತರಲಾಗಿತ್ತು. ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ವಿದೇಶೀಯರಿಂದಲೇ ಪೂಜೆ ಮಾಡಿಸಿ, ಎಳ್ಳು-ಬೆಲ್ಲ ವಿತರಿಸಿ ಸಂಭ್ರಮಿಸಲಾಯಿತು.

ಇದೇ ಸಂದರ್ಭದಲ್ಲಿ ಹಲವು ವರ್ಷಗಳಿಂದ ಗೋಪಾಲನೆ ಮತ್ತು ಗೋರಕ್ಷಣೆಯಲ್ಲಿ ನಿರತರಾಗಿರುವವರನ್ನು ಸನ್ಮಾನಿಸಲಾಯಿತು. ಅನಿಮಲ್‌ ವೆಲ್‌ ಫೇರ್‌ ಬೋರ್ಡಿನ ಸದಸ್ಯರಾದ ಮಿತ್ತಲ್‌, ಪಿಂಜ್ರಾಪೋಲಿನ ರಮೇಶ್‌ ಜೈನ್‌, ಪ್ರವೀಣ್‌ ಗೋಯಲ್‌, ದೇಸೀ ಗೋತಳಿ ಸಾಕಾಣಿಕೆಯಲ್ಲಿ ತೊಡಗಿರುವ ಚೈತನ್ಯ ಜೈನ್‌  ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ.ಟಿ. ಪ್ರಕಾಶ್‌, ನಗರ ಪಾಲಿಕೆ ಮಾಜಿ ಸದಸ್ಯ ಪ್ರಶಾಂತ್ ಗೌಡ, ಭಾರತೀಯ ಗೋಪರಿವಾರದ ಜಿಲ್ಲಾ ಸಂಯೋಜಕರಾದ ರಾಕೇಶ್‌ ಭಟ್‌, ಮೈಸೂರು ಹನುಮಂತೋತ್ಸವ ಸಮಿತಿಯ ಸಂಜಯ್‌, ಜೀವನ್‌, ಅಭಿ, ಪರಿವಾರದ ಮುಖಂಡರಾದ ಸಂದೇಶ್‌ ಪವಾರ್‌, ದೀಪಕ್‌ ಕುಂಚಿಟಿಗ, ವಿಕ್ರಮ್‌ ಅಯ್ಯಂಗಾರ್‌, ಉಮಾಶಂಕರ್‌, ಮಾಲಿನಿ, ಶಿವಾನಂದ್‌, ಹರೀಶ್‌ ಅಂಕಿತ್‌, ಹರಿಣಿ, ಯೋಗ ವಿದ್ಯಾರ್ಥಿಗಳಾದ ಅಲೆಕ್ಸ್, ದೀನಾ, ಖಾಯ್‌, ಇರೋಮಿ, ಯಾಸ್ಮಿನ್‌, ಜಾನ್ಹವಿ, ದೇವಿದಾಸ್‌, ಸೆಬಾಸ್ಟಿನ್‌, ಶ್ರೀರಾಮಚಂದ್ರಾಪುರ ಮಠದ ಮೈಸೂರು ವಲಯ ಮುಖ್ಯಸ್ಥರಾದ ಗಿರಿಜಾಶಂಕರ್‌, ವಿ.ಕೆ. ಭಟ್‌, ಸುಜಾತ ಶಂಕರನಾರಾಯಣ ಸೇರಿದಂತೆ ಹಲವರು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: