ಕರ್ನಾಟಕಪ್ರಮುಖ ಸುದ್ದಿ

ಹೆಚ್ಚಾದ ಬಿಸಿಲಿನ ಝಳ; ಕಲ್ಲಂಗಡಿ ಹಣ್ಣುಗಳಿಗೆ ಭಾರೀ ಬೇಡಿಕೆ

ಬೈಲಕುಪ್ಪೆ : ಕಳೆದ ಹದಿನೈದು ದಿನಗಳಿಂದ ತಾಲ್ಲೂಕಿನಾದ್ಯಂತ ಬಿಸಿಲಿನ ಝಳ ಹೆಚ್ಚಾಗಿದ್ದು ದಾಹ ಇಂಗಿಸಿಕೊಳ್ಳಲು ಜನ ಕಲ್ಲಂಗಡಿ ಹಣ್ಣಿಗೆ ಮೊರೆ ಹೋಗಿರುವುದರಿಂದ ಕಲ್ಲಂಗಡಿ ಹಣ್ಣುಗಳಿಗೆ ಭಾರಿ ಬೇಡಿಕೆ ಉಂಟಾಗಿದೆ.

ಪ್ರತಿ ವರ್ಷ ಶಿವರಾತ್ರಿ ಹಬ್ಬದ ನಂತರ ಶಿವಾ ಶಿವಾ ಎನ್ನುವ ಚಳಿ ಹೋಗಿ ಝಳ ಹೆಚ್ಚಾಗುತಿತ್ತು. ಆದರೆ ಈ ಬಾರಿ ಮಳೆಗಾಲ ಕಡಿಮೆಯಾಗಿ ಬರಗಾಲ ಉಂಟಾಗಿರುವುದರಿಂದ ಫೆಬ್ರವರಿ ಹಾಗೂ ಮಾರ್ಚ್ ಮೊದಲ ವಾರದಲ್ಲೇ ಬಿಸಿಲಿನ ಝಳದ ತೀವ್ರತೆ ಹೆಚ್ಚಾಗಿದೆ.

ತಾಲೂಕಿನಲ್ಲಿ 32 ಡಿಗ್ರಿ ಸೆಲ್ಸಿಯಸ್’ನಷ್ಟು ಉಷ್ಣಾಂಶವಿದ್ದು, ಮಧ್ಯಾಹ್ನದ ಹೊತ್ತಿನಲ್ಲಿ ಜನರು ಬಿಸಿಲಿನ ಝಳಕ್ಕೆ ಮನೆಯಿಂದ ಹೊರಬರುವುದೇ ಕಡಿಮೆಯಾಗಿದೆ ಎನ್ನತ್ತಾರೆ ಬೈಲಕುಪ್ಪೆ ಗ್ರಾಮದ ಅಮೃತ ಆಟೊಮೊಬೈಲ್ಸ್ ಮಾಲಿಕ ಕೇಶವಮೂರ್ತಿ.

ಬಿಸಿಲಿನ ಝಳದ ತೀವ್ರತೆಗೆ ಜನರಲ್ಲಿ ದಾಹ ಹೆಚ್ಚಾಗುತಿದ್ದು ದಾಹ ಇಂಗಿಸಿಕೊಳ್ಳಲು ಜನ ತಂಪಾದ ಪಾನೀಯ ಹಾಗೂ ಕಲ್ಲಂಗಡಿ ಹಣ್ಣಿಗೆ ಮೊರೆ ಹೋಗಿದ್ದಾರೆ. ಇದರಿಂದ ಕಲ್ಲಂಗಡಿ ಹಣ್ಣಿಗೆ ಭಾರಿ ಬೇಡಿಕೆ ಉಂಟಾಗಿದೆ.

ಕಳೆದ ಹದಿನೈದು ದಿನಗಳಿಂದ ಮನೆಗಳಲ್ಲಿ ಫ್ಯಾನ್‌ಗಳ ಬಳಕೆ ನಿರಂತರವಾಗಿದೆ. ಒಂದು ಕೆ.ಜಿ. ಕಲ್ಲಗಡಿ  ಹಣ್ಣನ್ನು ರೂ.25 ರಿಂದ ರೂ.30ಗಳಿಗೆ ಹಣ್ಣಿನ ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದಾರೆ. 5 ಕೆ.ಜಿ ತೂಕದ ಕಲ್ಲಂಗಡಿ ಹಣ್ಣಿನ ಬೆಲೆ ರೂ. 100 ರಿಂದ 120 ಇದ್ದು, ಅನಿವಾರ್ಯವಾಗಿ ದಾಹ ಇಂಗಿಸಿಕೊಳ್ಳಲು ಕಲ್ಲಂಗಡಿ ಹಣ್ಣನ್ನು ಹೆಚ್ಚಾಗಿ ಖರೀದಿ ಮಾಡುವುದರಿಂದ ಬೆಲೆ ಏರಿಕೆಯಾಗಿದೆ. ಇನ್ನು ಮುಂದಿನ ಏಪ್ರಿಲ್ ತಿಂಗಳಲ್ಲಿ ಕಲ್ಲಂಗಡಿ ಹಣ್ಣಿನ ಬೆಲೆ ತುಂಬಾ ಏರಿಕೆ ಕಾಣುವ ಲಕ್ಷಣಗಳಿವೆ ಎನ್ನತ್ತಾರೆ ಕಲ್ಲಂಗಡಿ ಹಣ್ಣಿನ ವ್ಯಾಪರಿ ಬೈಲಕುಪ್ಪೆ ಅಪ್ಪಿಖಾನ್.

(ಆರ್‍ಬಿಆರ್‍/ಎನ್‍ಬಿಎನ್‍)

Leave a Reply

comments

Related Articles

error: