ಮೈಸೂರು

ಸುರೇಶ್‍ಬಾಬುಗೆ ರೋಟರಿ ಕದಂಬ ರಂಗ ಪ್ರಶಸ್ತಿ

ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ರೋಟರಿ ಮೈಸೂರು ಉತ್ತರ ಮತ್ತು ಕದಂಬ ರಂಗ ವೇದಿಕೆ ಸಂಯುಕ್ತವಾಗಿ ನೀಡುವ ರೋಟರಿ ಕದಂಬ ರಂಗ ಪ್ರಶಸ್ತಿಯನ್ನು ರಂಗಕರ್ಮಿ ಎಚ್.ಎಸ್. ಸುರೇಶ್‍ಬಾಬು ಅವರಿಗೆ ನೀಡಲು ಉದ್ದೇಶಿಸಲಾಗಿದೆ ಎಂದು ಕದಂಬ ರಂಗ ವೇದಿಕೆ ಅಧ್ಯಕ್ಷ ರಾಜಶೇಖರ ಕದಂಬ ಹೇಳಿದರು.
ಗುರುವಾರ ನಗರದ ಪತ್ರಕರ್ತ ಭವನದಲ್ಲಿ ಮಾತನಾಡಿದ ಅವರು, ಸುರೇಶ್ ಅವರು `ಅಭಿಯಂತರರು’ ಎಂಬ ಸಾಂಸ್ಕೃತಿಕ ಸಂಸ್ಥೆ ಸ್ಥಾಪಿಸಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ರಂಗ ಚಟುವಟಿಕೆ ಹೇಳಿಕೊಡುತ್ತಿದ್ದಾರೆ. ಪ್ರತಿವರ್ಷವೂ 300ಕ್ಕೂ ಹೆಚ್ಚು ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ರಂಗಭೂಮಿಗೆ ಪರಿಚಯಿಸಿದ್ದು,  ಮಾ.31ರ ಸಂಜೆ 6.30ಕ್ಕೆ ಜೆಎಲ್‍ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆ ಕಾರ್ಯದರ್ಶಿ ಎಂ.ರಾಜು, ರೋಟರಿ ಉತ್ತರದ ಅಧ್ಯಕ್ಷ ಮಹದೇವಪ್ಪ, ಕಾರ್ಯದರ್ಶಿ ಎಸ್.ನರಸಿಂಹ ಉಪಸ್ಥಿತರಿದ್ದರು. (ಎಲ್.ಜಿ. ಎಸ್.ಎಚ್)

Leave a Reply

comments

Related Articles

error: