ಕ್ರೀಡೆಪ್ರಮುಖ ಸುದ್ದಿ

ಐಸಿಸಿ ವಿಶ್ವಕಪ್ 2019 ರ ಸಂದರ್ಭದಲ್ಲಿ ಸುದ್ದಿಯಲ್ಲಿದ್ದ ಅಜ್ಜಿ, ವಿರಾಟ್ ಕೊಹ್ಲಿ ಅವರ ನೆಚ್ಚಿನ ಅಭಿಮಾನಿ ಚಾರುಲತಾ ಪಟೇಲ್ ನಿಧನ

ದೇಶ(ನವದೆಹಲಿ)ಜ.16:- ಐಸಿಸಿ ವಿಶ್ವಕಪ್ 2019 ರ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್ ತಂಡದ 87 ವರ್ಷದ ಕ್ರಿಕೆಟ್ ಅಭಿಮಾನಿ ಚಾರುಲತಾ ಪಟೇಲ್ ಸುದ್ದಿಯಲ್ಲಿದ್ದರು.

ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಚಾರುಲತಾ ಕ್ರೀಡಾಂಗಣವನ್ನು ತಲುಪಿ ಟೀಮ್ ಇಂಡಿಯಾವನ್ನು ಬೆಂಬಲಿಸಿದ್ದರು. ಅಷ್ಟೇ ಅಲ್ಲ, ನಾಯಕ ವಿರಾಟ್ ಕೊಹ್ಲಿಯಿಂದ ಹಿಡಿದು ಉಪನಾಯಕ ರೋಹಿತ್ ಶರ್ಮಾ ವರೆಗೂ ಚಾರುಲತಾ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದರು.

ವಿಶ್ವಕಪ್‌ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದ ನಂತರ ಚಾರುಲತಾ ಪಟೇಲ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಎಲ್ಲರೂ ಅವರ ಬಗ್ಗೆ ಮಾತನಾಡುತ್ತಿದ್ದರು.

ವಿರಾಟ್ ಮತ್ತು ರೋಹಿತ್ ಕೂಡ ಚಾರುಲತಾ ಅವರಿಗೆ ಕ್ರಿಕೆಟ್ ಬಗ್ಗೆ ಇರುವ  ಉತ್ಸಾಹವನ್ನು ನೋಡಿ ಆಶ್ಚರ್ಯಚಕಿತರಾಗಿದ್ದರು.  ಬಾಂಗ್ಲಾದೇಶ ವಿರುದ್ಧದ ಪಂದ್ಯ ಮುಗಿದ ನಂತರ ವಿರಾಟ್ ಮತ್ತು ರೋಹಿತ್ ಅವರನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆದಿದ್ದರು.  ಚಾರುಲತಾ ಪಟೇಲ್ ಅವರ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯು ಅವರ ನಿಧನವನ್ನು ದೃಢಪಡಿಸಿದೆ.  ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿನ ಒಂದು ಪೋಸ್ಟ್, ‘ನಮ್ಮ ಅಜ್ಜಿ ಜನವರಿ 13 ರಂದು ಸಂಜೆ 5. 30 ಕ್ಕೆ ಕೊನೆಯುಸಿರೆಳೆದಿದ್ದು, ಎಲ್ಲರಿಗೂ ಬಹಳ ದುಃಖದಿಂದ ಹೇಳಬೇಕಿದೆ ಎಂಬ ಬರಹವೊಂದಿದೆ.  (ಏಜೆನ್ಸಿಸ್, ಎಸ್.ಎಚ್)

Leave a Reply

comments

Related Articles

error: