ಮೈಸೂರು

ಮನೆಗೆಲಸಕ್ಕೆ ತೆರಳುತ್ತಿದ್ದ ವೃದ್ಧೆಗೆ ಬಸ್ ಡಿಕ್ಕಿ: ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಪಾಲಿಕೆಯ ಮಾಜಿ ಸದಸ್ಯ ಶಂಕರ್

ಮೈಸೂರು,ಜ.16:- ಮನೆಗೆಲಸಕ್ಕೆಂದು ತೆರಳುತ್ತಿದ್ದ ವೃದ್ಧೆಯೋರ್ವರಿಗೆ ಬಸ್ ಡಿಕ್ಕಿಯಾದ ಪರಿಣಾಮ ವೃದ್ಧೆ ಗಾಯಗೊಂಡು ರಸ್ತೆಯಲ್ಲಿ ಬಿದ್ದ ಘಟನೆ ರಾಮಕೃಷ್ಣ ನಗರದ ಎ &ಎಫ್ ಬ್ಲಾಕ್ ನಲ್ಲಿ ನಡೆದಿದ್ದು, ಇದನ್ನು ಗಮನಿಸಿದ ಪಾಲಿಕೆಯ ಮಾಜಿ ಸದಸ್ಯ ಶಂಕರ್ ವೃದ್ಧೆಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ರಾಮಕೃಷ್ಣ ನಗರದ ಎ & ಎಫ್ ಬ್ಲಾಕ್ ನಿವಾಸಿ ನಂಜಮ್ಮ ಎಂಬವರು ಇಂದು ಬೆಳಿಗ್ಗೆ ಮನೆಗೆಲಸಕ್ಕೆ ಹೊರಟಿದ್ದರು. ಈ ವೇಳೆ ಅವರಿಗೆ ಬಸ್ ಡಿಕ್ಕಿ ಹೊಡೆದಿದ್ದು ತಲೆಗೆ ಗಾಯವಾಗಿದೆ. ಅವರು ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿರುವುದನ್ನು ಗಮನಿಸಿದ ವಾಯುವಿಹಾರಕ್ಕೆ ತೆರಳಿದ್ದ ಪಾಲಿಕೆಯ ಮಾಜಿ ಸದಸ್ಯ ಶಂಕರ್ ಅವರನ್ನು ಅಲ್ಲೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.  ಅಷ್ಟೇ ಅಲ್ಲದೇ ಕುವೆಂಪುನಗರ ಪೊಲೀಸ್ ಠಾಣೆಗೆ ಬಸ್ ಚಾಲಕನ ವಿರುದ್ಧ ದೂರು ನೀಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: