ಮೈಸೂರು

ಮನುಷ್ಯತ್ವವಿಲ್ಲವೆಂದು ಕೂಗಾಡಿದ್ದ ನಳಿನಿ ಈಗ ಮಾಧ್ಯಮಗಳ ಬಳಿ ಕ್ಷಮೆಯಾಚನೆ

ಮೈಸೂರು, ಜ.16:-  ಮೈಸೂರು ವಿವಿ ಆವರಣದಲ್ಲಿ ಪ್ರತಿಭಟನೆಯ ವೇಳೆ ‘ಫ್ರೀ ಕಾಶ್ಮೀರ’ ಎಂಬ ಫಲಕ ಪ್ರದರ್ಶಿಸಿದ  ಯುವತಿ ನಳಿನಿ ವಿರುದ್ಧ ಎಫ್ ಐ ಆರ್ ದಾಖಲಾಗಿತ್ತು. ಬಳಿಕ ಮಧ್ಯಂತರ ಜಾಮೀನು ಕೂಡ ನೀಡಲಾಗಿತ್ತು. ಆಕೆಯ ಪರ ವಕಾಲತ್ತು ವಹಿಸಲು ಮೈಸೂರು ವಕೀಲರು ನಿರಾಕರಿಸಿದ್ದು, ವಕೀಲರ ಸಂಘಕ್ಕೆ ಯಾರೂ ವಕಾಲತ್ತು  ವಹಿಸಬಾರದಂತೆ ನೋಡಿಕೊಳ್ಳುವಂತೆ ಮನವಿ ಮಾಡಿದ್ದರು.

ಮೈಸೂರು ನ್ಯಾಯಾಲಯಕ್ಕೆ ತಾಯಿ ಜೊತೆ ಹಾಜರಾದ ನಳಿನಿ  ಮಾಧ್ಯಮಗಳ ಕ್ಷಮೆ ಯಾಚಿಸಿದ್ದಾರೆ. ಮೈಸೂರು ವಿವಿ ಕ್ಯಾಂಪಸ್​ನಲ್ಲಿ ಜೆಎನ್​ಯು ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಖಂಡಿಸಿ ಪ್ರತಿಭಟನೆ ನಡೆಸಿದ ವೇಳೆ, ಫ್ರೀ ಕಾಶ್ಮೀರ ಎಂಬ ಪೋಸ್ಟರ್​​ ಹಿಡಿದಿದ್ದ ನಳಿನಿ, ಇಂದು ನ್ಯಾಯಾಲಯಕ್ಕೆ ತಾಯಿ ಜೊತೆ ಬಂದಿದ್ದರು. ಮಾಧ್ಯಮಗಳ ವಿರುದ್ಧ ಕಿಡಿಕಾರಿ, ಮನುಷ್ಯತ್ವ ಇಲ್ಲದವರು ಎಂದು ಕೂಗಾಡಿದ್ದರು. ಆದರೆ ಆ ಬಳಿಕ ತಮ್ಮ ವರ್ತನೆಗೆ ಕ್ಷಮೆ ಕೂಡಾ ಕೇಳಿದ್ದಾರೆ.ಮಾಧ್ಯಮಗಳ ಕ್ಷಮೆಯಾಚಿಸಿದ ಯುವತಿ ಇನ್ನು ಮುಂದೆ ಈ ರೀತಿ ವರ್ತನೆ ತೋರುವುದಿಲ್ಲ.  ನಾನಿರುವ ಪರಿಸ್ಥಿತಿ ನನ್ನನ್ನು ಈ ರೀತಿ ವರ್ತಿಸುವಂತೆ ಮಾಡಿತು. ಈಗ ನನಗೆ ಪಶ್ಚಾತ್ತಾಪವಾಗುತ್ತಿದೆ. ನನ್ನನ್ನು ಬದಲಾಯಿಸಿಕೊಳ್ಳಲು ಹಾಗೂ ಜವಬ್ದಾರಿಯುತ ನಡವಳಿಕೆ ಹೊಂದಲು ಪ್ರಯತ್ನಿಸುತ್ತೇನೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: