ಮೈಸೂರು

ನಾಳೆಯಿಂದ ನಗರದಲ್ಲಿ ಶೃಂಗೇರಿಶ್ರೀ ವಾಸ್ತವ್ಯ

40 ವರ್ಷದ ನಂತರ ಶೃಂಗೇರಿ ಶಂಕರ ಮಠದ ಭಾರತೀ ತೀರ್ಥ ಸ್ವಾಮೀಜಿ ಮತ್ತು ಕಿರಿಯ ಶ್ರೀಗಳು  ಮಾ.11ರಿಂದ 13ರ ವರೆಗೆ ನಗರದ ಶಂಕರಮಠದಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂದು ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್ ಹೇಳಿದರು.
ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾ. 11ರ ಸಂಜೆ 5ಕ್ಕೆ  ಸ್ವಾಮೀಜಿ ಪುರ ಪ್ರವೇಶಿಸಲಿದ್ದು ಮೇಯರ್ ಎಂ.ಜೆ. ರವಿಕುಮಾರ್, ಶಂಕರಮಠದ ಧರ್ಮಾಧಿಕಾರಿ ರಾಮಚಂದ್ರ ಮತ್ತು ವಿಪ್ರ ಮುಖಂಡರು ಸ್ವಾಗತಿಸಲಿದ್ದಾರೆ. ನಂತರ ಮೈಸೂರು ಅರಮನೆಗೆ ಆಗಮಿಸಿ ಬಳಿಕ ಶೋಭಾಯಾತ್ರೆ ಮೂಲಕ ಶಂಕರಮಠಕ್ಕೆ ಆಗಮಿಸಲಿದ್ದಾರೆ ಎಂದು  ತಿಳಿಸಿದರು.
ಮಾ.12ರ ಬೆಳಿಗ್ಗೆ 9.30ರಿಂದ ಭಕ್ತಾದಿಗಳಿಗೆ ಧರ್ಮದರ್ಶನ ಮತ್ತು ಫಲಮಂತ್ರಾಕ್ಷತೆ ನೀಡಲಿದ್ದಾರೆ. ಸಂಜೆ 5.30ಕ್ಕೆ ಗುರುವಂದನೆ ಏರ್ಪಡಿಸಲಾಗಿದ್ದು, ಯದುವಂಶಸ್ಥ ಯದುವೀರ್ ಕೃಷ್ಣದತ್ತ  ಚಾಮರಾಜ ಒಡೆಯರ್ ಭಾಗವಹಿಸುವರು. ರಾತ್ರಿ 8.30ಕ್ಕೆ ಚಂದ್ರಮೌಳೇಶ್ವರ ಪೂಜೆ ನೆರವೇರಿಸುವರು. ಮಾ. 13ರ ಬೆಳಿಗ್ಗೆ 9.30ರಿಂದ 12.30ರ ವರೆಗೆ ಧರ್ಮದರ್ಶನ ಮತ್ತು ಫಲಮಂತ್ರಾಕ್ಷತೆ ವಿತರಿಸುವರು, ನಂತರ ಸಂಜೆ 5.30 ಕ್ಕೆ ಹೆಬ್ಬೂರಿಗೆ ತೆರಳಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ವಿಪ್ರ ಮುಖಂಡರಾದ ಡಾ.ವಿ. ಭಾನುಪ್ರಕಾಶ್, ಮುಳ್ಳೂರು ಗುರುಪ್ರಸಾದ್, ಅಪೂರ್ವ ಸುರೇಶ್, ಗೋಪಾಲರಾವ್ ಮತ್ತಿತರರು ಉಪಸ್ಥಿತರಿದ್ದರು. (ಎಲ್.ಜಿ. ಎಸ್.ಎಚ್)

Leave a Reply

comments

Related Articles

error: