ಮೈಸೂರು

ಜಾದೂ ಪ್ರದರ್ಶನ :ಮಾ.10 ರಂದು

ಜಾದೂಗಾರ ಎಸ್.ಎನ್. ಗುರುಸ್ವಾಮಿ ಜಾದೂ ಸಂಸ್ಥೆಯ 26 ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಮಾ.11ರ ಸಂಜೆ 5ಕ್ಕೆ ಜೆಎಸ್‍ಎಸ್ ಆಸ್ಪತ್ರೆ ಆವರಣದ ರಾಜೇಂದ್ರ ಭವನದಲ್ಲಿ ಜಾದೂ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ಕಲಾವಿದೆ ಸುಮಾ ರಾಜ್‍ಕುಮಾರ್ ಹೇಳಿದರು.
ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿ.ಪಂ ಉಪಾಧ್ಯಕ್ಷ ಕೈಯಂಬಳ್ಳಿ ನಟರಾಜ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಎಂ.ಕೆ. ಸೋಮಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ.ಮಲ್ಲನಮೂಲೆ ಮಠಾಧೀಶ ಚನ್ನಬಸವ ಸ್ವಾಮೀಜಿ, ಕುದೇರು ಮಠದ ಗುರುಶಾಂತ ಸ್ವಾಮೀಜಿ, ಸೋಮೇಶ್ವರ ಮಠದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದು  ತಿಳಿಸಿದರು.
ಹೊಸದುರ್ಗದ ವಿ. ಮೋಹನ್‍ಕುಮಾರ್, ಬೆಂಗಳೂರಿನ ಸುರೇಶ್ ಬಾಬು, ಶಿವಮೊಗ್ಗದ ಕಾಂತೇಶ್, ದಾವಣಗೆರೆಯ ವಿರೂಪಾಕ್ಷ ಅವರು ಜಾದೂ ಪ್ರಸ್ತುತ ಪಡಿಸಲಿದ್ದು, ಹಾವಾಡಿಗ ಸೈಯಾದ್ ಪಾಷ ಅವರನ್ನು ಸನ್ಮಾನಿಸಲಾಗುವುದು. ಪ್ರವೇಶ ಉಚಿತವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಜಾದೂಗಾರ ಎಸ್.ಎನ್. ಗುರುಸ್ವಾಮಿ, ಸಮಾಜಸೇವಕರಾದ ಎಸ್.ಆರ್. ಗೋಪಾಲರಾವ್, ಗುರುಪಾದಸ್ವಾಮಿ ಇದ್ದರು. (ಎಲ್.ಜಿ ಎಸ್.ಎಚ್)

Leave a Reply

comments

Related Articles

error: