ಪ್ರಮುಖ ಸುದ್ದಿಮೈಸೂರು

ಪದ್ಮಶ್ರೀ ಪುರಸ್ಕೃತ ಸಂಗೀತ ವಿದ್ವಾಂಸ ಡಾ.ರಾ.ಸತ್ಯನಾರಾಯಣ ನಿಧನ

ಮೈಸೂರು,ಜ.17- ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಂಗೀತ ವಿದ್ವಾಂಸ ಡಾ.ರಾ.ಸತ್ಯನಾರಾಯಣ (93) ನಿಧನರಾಗಿದ್ದಾರೆ.

ಗುರುವಾರ ರಾತ್ರಿ ಇಲ್ಲಿನ ಜಯನಗರದಲ್ಲಿರುವ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಶುಕ್ರವಾರ ಮಧ್ಯಾಹ್ನ 1.30ರವರೆಗೆ ನಿವಾಸದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಂತ್ಯಸಂಸ್ಕಾರ ಸಂಜೆ 4.30ಕ್ಕೆ ಮೈಸೂರು- ಬೆಂಗಳೂರು ರಸ್ತೆಯ ಕೆಂಗಲ್ ಗ್ರಾಮದ ಬಳಿಯ ‘ರಸ ಋಷಿ’ ಆಶ್ರಮದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರು ಪುತ್ರ ರಾ.ಸ.ನಂದಕುಮಾರ್ ಹಾಗೂ ಪುತ್ರಿ ರೋಹಿಣಿ ಸುಬ್ಬರತ್ನಂ ಅವರನ್ನು ಅಗಲಿದ್ದಾರೆ.

ಜಯಚಾಮರಾಜ ಒಡೆಯರ್ ಅವರ ಆಸ್ಥಾನದಲ್ಲಿ ಸಂಗೀತ ವಿದ್ವಾಂಸರಾಗಿದ್ದ ರಾಮಯ್ಯ ಅವರ ಪುತ್ರರಾದ ಇವರು ಸಂತ ತ್ಯಾಗರಾಜ ಸಂಗೀತ ಪರಂಪರೆಯನ್ನು ಮುಂದುವರಿಸಿದವರು. ಇವರಿಗೆ ಕಾಶಿ ವಿಶ್ವವಿದ್ಯಾಲಯದಿಂದ ಮಹೋಪಧ್ಯಾಯ, ರಾಜ್ಯ ಸಂಗೀತ ವಿದ್ವಾನ್, ಸಂಗೀತ ನಾಟಕ ಅಕಾಡೆಮಿ ರತ್ನ, ವೀಣೆ ರಾಜಾರಾವ್ ರಾಷ್ಟ್ರೀಯ ಪ್ರಶಸ್ತಿ ಲಭಿಸಿವೆ.

ಇವರು ತಮ್ಮ ಅಂತಿಮ ಕ್ಷಣದವರೆಗೂ ‘ಸಂಗೀತ ಸುಧಾಕರ’ ಎಂಬ ಪುಸ್ತಕ ರಚನೆಯಲ್ಲಿ ತೊಡಗಿದ್ದರು. ‘ಇನ್ನು ನನ್ನ ಕೈಯಲ್ಲಿ ಆಗುವುದಿಲ್ಲ. ಈ ಕೆಲಸವನ್ನು ಮುಂದುವರಿಸು ಎಂದು ನನಗೆ ಹೇಳಿದ್ದರು’ ಎಂದು ಪುತ್ರ ರಾ.ಸ.ನಂದಕುಮಾರ್ ತಿಳಿಸಿದ್ದಾರೆ. (ಎಂ.ಎನ್)

 

Leave a Reply

comments

Related Articles

error: