ಮೈಸೂರು

ಡಯಾಲಿಸೀಸ್ ರೋಗಿಗಳಿಗೆ ಚೆಕ್ ವಿತರಣೆ

ವಿಶ್ವ ಮೂತ್ರ ಪಿಂಡ ದಿನಾಚರಣೆಯ ಅಂಗವಾಗಿ  ಮೈಸೂರಿನ ಸಮ್ಮಿಲನ ಗ್ರೂಪ್ ವತಿಯಿಂದ ಡಯಾಲಿಸೀಸ್ ರೋಗಿಗಳಿಗೆ ಡಯಾಲಿಸೀಸ್  ವೆಚ್ಚದ ಚೆಕ್ ಅನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಮೈಸೂರಿನ  ಬಿಬಿ ಆಯುಷ ಆಸ್ಪತ್ರೆಯಲ್ಲಿ  ಡಯಾಲಿಸೀಸ್ ರೋಗಿಗಳಿಗೆ ಸಮ್ಮಿಲನ ಸಂಸ್ಥೆಯ ಪದಾದಿಕಾರಿಗಳು ಚೆಕ್ ನ್ನು ವಿತರಿಸಿದರು.

ಕಾರ್ಯಕ್ರಮದಲ್ಲಿ ಸಮ್ಮಿಲನ ಗ್ರೂಪ್ ನ ಅನ್ನಪೂರ್ಣ ಮಾತನಾಡಿ ನಮ್ಮ ಈ ಸಮ್ಮಿಲನ ಗ್ರೂಪ್ 5 ವರ್ಷಗಳ ಹಿಂದೆ ಸ್ಥಾಪನೆಯಾಗಿದ್ದು,  ಪ್ರತಿ ವರ್ಷವೂ ಹತ್ತು ಹಲವು ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬಂದಿದೆ. ಹಿಂದಿನ ವರ್ಷ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ಈ ಡಯಾಲಿಸೀಸ್ ರೋಗಿಗಳಿಗೆ ಡಯಾಲಿಸೀಸ್ ಮಾಡಿಸಲು ನಮ್ಮ ಸಮ್ಮಿಲನ ಗ್ರೂಪ್ ಚೆಕ್ ನ್ನು ವಿತರಿಸಿದೆ. ಈ ಎಲ್ಲಾ ರೋಗಿಗಳು ಆದಷ್ಟು ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಡಾ.ಮನೋಜ್, ಕವಿತ ,ಮೇರಿ, ಸಮ್ಮಿಲನ ಗ್ರೂಪ್ ನ ಸದಸ್ಯರು, ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. (ಬಿ.ಎಂ,ಎಸ್.ಎಚ್)

Leave a Reply

comments

Related Articles

error: