ಮೈಸೂರು

ದೈಹಿಕ ಶಿಕ್ಷಕರಿಗಾಗಿ ಯೋಗ, ಆಯುರ್ವೇದಿಕ್, ಏರೋಟಿಕ್ಸ್ ತರಬೇತಿ ಕಾರ್ಯಗಾರ

ಮೈಸೂರು,ಜ.17-ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ದೈಹಿಕ ಶಿಕ್ಷಕರ ಸಂಘದ ಸಂಯುಕ್ತಾಶ್ರಯದಲ್ಲಿ ಇಂದು ವಿಶ್ವಮಾನವ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕರಿಗಾಗಿ ಯೋಗ, ಆಯುರ್ವೇದಿಕ್ ಮತ್ತು ಏರೋಟಿಕ್ಸ್ ತರಬೇತಿ ಕಾರ್ಯಗಾರ ಏರ್ಪಡಿಸಲಾಗಿತ್ತು.

ನಿವೃತ್ತ ಪ್ರೌಢಶಾಲಾ ಶಿಕ್ಷಕರಾದ ದಳವಾಯಿ ಶಾಲೆಯ ಚಂದ್ರಶೇಖರ್, ಐಒಇ ಶಾಲೆಯ ಭಾಗ್ಯಮ್ಮ, ಜೆಎಸ್ಎಸ್ ಶಾಲೆಯ ರವೀಂದ್ರ, ಸಿಕೆಸಿ ಶಾಲೆಯ ಮಲ್ಲಿಕಾರ್ಜುನ ಅವರನ್ನು ಸನ್ಮಾನಿಸಲಾಯಿತು.

ದಕ್ಷಿಣ ವಲಯದ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ರಾಷ್ಟ್ರಮಟ್ಟದಲ್ಲಿ ಸ್ಥಾನ ಪಡೆದ ವಿವಿಧ ಶಾಲೆಗಳ 18 ವಿದ್ಯಾರ್ಥಿ ಕ್ರೀಡಾಪಟಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಅಂತಾರಾಷ್ಟ್ರೀಯ ಯೋಗಪಟುಗಳಾದ ಕುವಲಾಶ್, ಪೂಜಾ ಇವರಿಂದ ಯೋಗಾಸನಗಳ ಪ್ರದರ್ಶನ ಪ್ರಾತ್ಯಕ್ಷಿತೆ ನೇರವೇರಿತು. ಸಿನಿಯರ್ ಅಡ್ವೈಸರ್ ಅಶ್ವಿನಿ ಅವರಿಂದ ಆಯುರ್ವೇದಿಕ್ ಔಷಧಿಗಳ, ಆಹಾರ ಮಹತ್ವ ಪರಿಕಲ್ಪನೆಗಳ ತರಬೇತಿ ನಡೆಯಿತು.

ಕಾರ್ಯಕ್ರಮಮದಲ್ಲಿ ಬಿಆರ್ ಸಿ ನಾಗೇಶ್, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಜಿ.ನಾಗೇಶ್, ಸರೋಜಿನಿ, ರಾಮ್ ಪ್ರಸಾದ್, ಗಂಗೇಶ್, ಸೋಮಶೇಖರ್, ಚಂದ್ರನಾಯ್ಕ, ಕೃಷ್ಣೇಗೌಡ, ಚಂದ್ರು, ಡಾ.ಶಶಿಧರ್, ಉಮಾಕುಮಾರಿ, ಎಂ.ಎನ್.ಶಿವಕುಮಾರ್, ಚಂದ್ರಶೇಖರ್, ಜಯಶೀಲ, ಶಿವಕುಮಾರ್ ಇತರರು ಉಪಸ್ಥಿತರಿದ್ದರು. (ಎಚ್.ಎನ್, ಎಂ.ಎನ್)

Leave a Reply

comments

Related Articles

error: