ಪ್ರಮುಖ ಸುದ್ದಿ

ಸಿಎಎ ಪರ ಭಾಷಣ ಮಾಡಿದ ಮುಖಂಡರ ಹತ್ಯೆಗೆ ಸ್ಕೆಚ್ ಹಾಕಿದ ವಿಚಾರ : ಬಂಧನಕ್ಕೊಳಗಾಗಿರುವವರ ವಿರುದ್ಧ ಸೂಕ್ತ ತನಿಖೆ ನಡೆಸಿ ; ಶ್ರೀರಾಮುಲು

ರಾಜ್ಯ(ಬೆಂಗಳೂರು)ಜ.17:-  ಟೌನ್ ಹಾಲ್ ಬಳಿ ರ್ಯಾಲಿಯಲ್ಲಿ ಸಿಎಎ ಪರ ಭಾಷಣ ಮಾಡಿದ ಮುಖಂಡರ ಹತ್ಯೆಗೆ ಸ್ಕೆಚ್ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಶ್ರೀರಾಮುಲು ಬಂಧನಕ್ಕೊಳಗಾಗಿರುವವರ ವಿರುದ್ಧ ಸೂಕ್ತ ತನಿಖೆ ನಡೆಸಿ ಶಿಕ್ಷೆಯಾಗಲಿ ಎಂದು ಒತ್ತಾಯಿಸಿದ್ದಾರೆ.

ಈ ಬಗ್ಗೆ ಇಂದು ಮಾತನಾಡಿದ ಸಚಿವ ಶ್ರೀರಾಮುಲು, ಹಿಂದೂ ಕಾರ್ಯಕರ್ತರು  ಮೇಲೆ ಹಲ್ಲೆ ಕೊಲೆಗೆ ಯತ್ನಿಸುತ್ತಿವೆ. ಹೀಗಾಗಿ ಎಸ್ ಡಿಪಿಐ ಸಂಘಟನೆ ಬ್ಯಾನ್ ಮಾಡಬೇಕು.  ಈ ಸಂಘಟನೆಯ ಕೆಲವರು ಬಂಧನಕ್ಕೊಳಗಾಗಿದ್ದಾರೆ . ಉಪ್ಪು ತಿಂದವರು ನೀರು ಕುಡಿಯಲೇ ಬೇಕು.  ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು ಎಂದರು.

ಎಸ್ ಡಿಪಿಐ ಪಿಎಫ್ ಐ ಎರಡು ಸಂಘಟನೆಗಳನ್ನ ಬ್ಯಾನ್ ಮಾಡಲು ಗೃಹ ಸಚಿವರಿಗೆ ಮನವಿ ಮಾಡ್ತೇವೆ. ಮುಂದಿನ ತಿಂಗಳು ಸಿಎಂ ಬಿಎಸ್ ವೈ ದೆಹಲಿಗೆ ತೆರಳುತ್ತಾರೆ ಅಂದು ನಿಯೋಗ ತೆರಳಿ ಎಸ್ ಡಿಪಿಐ ನಿಷೇಧಕ್ಕೆ ಮನವಿ ಮಾಡ್ತೀವಿ ಎಂದು ಶ್ರೀರಾಮುಲು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: