ಪ್ರಮುಖ ಸುದ್ದಿ

ರಾಜ್ಯ ಮತ್ತು ದೇಶದಲ್ಲಿ ಶಾಂತಿ ನೆಲೆಸಬೇಕು ಅಂದ್ರೆ ಎಸ್ ಡಿಪಿಐ ಬ್ಯಾನ್ ಮಾಡಬೇಕು : ಸಂಸದ ತೇಜಸ್ವಿ ಸೂರ್ಯ

ರಾಜ್ಯ(ಬೆಂಗಳೂರು),ಜ.17:-  ಬೆಂಗಳೂರಿನ ಟೌನ್ ಹಾಲ್ ಬಳಿ ಸಿಎಎ ಪರ ರ್ಯಾಲಿ  ವೇಳೆ ಭಾಷಣ ಮಾಡಿದ್ದ ಮುಖಂಡರ ಹತ್ಯೆಗೆ ಸ್ಕೇಚ್ ಹಾಕಿದ್ದ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಸಂಸದ ತೇಜಸ್ವಿ ಸೂರ್ಯ, ರಾಜ್ಯ ಮತ್ತು ದೇಶದಲ್ಲಿ ಶಾಂತಿ ನೆಲೆಸಬೇಕು ಅಂದ್ರೆ ಎಸ್ ಡಿಪಿಐ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಟೌನ್ ಹಾಲ್ ಬಳಿ ಸಿಎಎ ಪರ ರ್ಯಾಲಿ ವೇಳೆ ಭಾಷಣ ಮಾಡಿದ್ದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮತ್ತು ಚಕ್ರವರ್ತಿ ಸೂಲಿಬೆಲೆ ಹತ್ಯೆಗೆ 6 ಮಂದಿ ಎಸ್ ಡಿಪಿಐ ಕಾರ್ಯಕರ್ತರು  ಸ್ಕೆಚ್ ಹಾಕಿದ್ದರು ಎನ್ನಲಾಗಿದ್ದು ಈ ಸಂಬಂಧ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಂಸದ ತೇಜಸ್ವಿ ಸೂರ್ಯ, ದೇಶದ ಪರ ಕೆಲಸ ಮಾಡುವವರ ಮೇಲೆ ದಾಳಿ ನಡೆಸಲಾಗುತ್ತಿದೆ. ಅಂದು ಚಕ್ರವರ್ತಿ ಸೂಲಿಬೆಲೆ ಭಾಷಣದ ವೇಳೆ ಕಲ್ಲು ತೂರಿದ್ದರು. ಆದರೆ ಕಲ್ಲು ಸೂಲಿಬೆಲೆ ಅವರ ಮೇಲೆ ಬೀಳಲಿಲ್ಲ. ಆದ್ರೆ ಅದರಿಂದ ಕಾರ್ಯಕರ್ತರಿಗೆ ತೊಂದರೆಯಾಗಿತ್ತು.  ಹೀಗಾಗಿ ರಾಜ್ಯ ದೇಶದಲ್ಲಿ ಶಾಂತಿ ನೆಲೆಸಬೇಕು ಅಂದ್ರೆ ಎಸ್ ಡಿಪಿಐ ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: