ಪ್ರಮುಖ ಸುದ್ದಿವಿದೇಶ

ನೇಪಾಳ: ವಿಶ್ವದ ಕುಬ್ಜ ವ್ಯಕ್ತಿ ಖಗೇಂದ್ರ ಥಾಪ ಮಗರ್ ನಿಧನ

ಕಠ್ಮಂಡು,ಜ.18- ವಿಶ್ವದ ಕುಬ್ಜ ವ್ಯಕ್ತಿ, ಗಿನ್ನೆಸ್ ವಿಶ್ವ ದಾಖಲೆಗೆ ಪಾತ್ರವಾಗಿದ್ದ ಖಗೇಂದ್ರ ಥಾಪ ಮಗರ್ (28) ನಿಧನರಾಗಿದ್ದಾರೆ.

ನ್ಯುಮೋನಿಯಾದಿಂದ ಖಗೇಂದ್ರ ಕಠ್ಮಂಡುವಿನ ಪೊಖಾರದಲ್ಲಿರುವ ಆಸ್ಪತ್ರೆಯಲ್ಲಿ ಕೊರೆಯುಸಿರೆಳೆದಿದ್ದಾರೆ. 1992ರ ಅಕ್ಟೋಬರ್ 14ರಂದು ನೇಪಾಳದಲ್ಲಿ ಜನಿಸಿದ್ದ ಖಗೇಂದ್ರ 67.08 ಸೆಂಟಿಮೀಟರ್ (2 ಅಡಿ,2.41 ಇಂಚು) ಎತ್ತರದವರಾಗಿದ್ದರು. ಖಗೇಂದ್ರ ಹೆತ್ತವರೊಂದಿಗೆ ವಾಸಿಸುತ್ತಿದ್ದರು.

ನ್ಯುಮೋನಿಯಾದಿಂದಾಗಿ ಅವರು ಆಸ್ಪತ್ರೆ ಹೋಗಿ, ಬರುತ್ತಿದ್ದರು. ಈ ಬಾರಿ ಅವರಿಗೆ ಹೃದಯಕ್ಕೆ ನ್ಯುಮೋನಿಯಾ ಬಾಧಿಸಿದ್ದು, ಅವರು ಇಂದು ಮೃತಪಟ್ಟಿದ್ದಾರೆ ಎಂದು ಖಗೇಂದ್ರ ಅವರ ಸಹೋದರ ಮಹೇಶ್ ತಿಳಿಸಿದ್ದಾರೆ.

ಖಗೇಂದ್ರ ಹುಟ್ಟುವಾಗಲೇ ಕುಬ್ಜನಾಗಿದ್ದ. ಅವನು ನಿಮ್ಮ ಅಂಗೈಯಷ್ಟು ಉದ್ದವಿದ್ದ. ಆತ ತುಂಬಾ ಚಿಕ್ಕವನಿದ್ದ ಕಾರಣ ಅವನನ್ನು ಸ್ನಾನ ಮಾಡಿಸುವುದು ಕಷ್ಟಕರವಾಗಿತ್ತು ಎಂದು ಖಗೇಂದ್ರ ಅವರ ತಂದೆ ರೂಪ್ ಬಹದೂರ್ ಹೇಳಿದ್ದಾಗಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ತಿಳಿಸಿದೆ. ಖಗೇಂದ್ರ ನಿಧನಕ್ಕೆ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಮುಖ್ಯ ಸಂಪಾದಕ ಕ್ರೆಗ್ ಗ್ಲೆನ್‌ಡೆ ಶೋಕ ವ್ಯಕ್ತಪಡಿಸಿದ್ದಾರೆ.

ಖಗೇಂದ್ರ 12ಕ್ಕೂ ಅಧಿಕ ದೇಶಗಳಿಗೆ ಪ್ರಯಾಣಿಸಿದ್ದು, ಯುರೋಪ್ ಹಾಗೂ ಅಮೆರಿಕದ ಟಿವಿಗಳಲ್ಲಿ ಕಾಣಿಸಿಕೊಂಡಿದ್ದರು. ಖಗೇಂದ್ರ ನೇಪಾಳ ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಯಾಗಿದ್ದರು. ಭಾರತದ ಅತ್ಯಂತ ಕುಬ್ಜ ಮಹಿಳೆ ಜ್ಯೋತಿ ಅಮಗೆ ಸೇರಿದಂತೆ ವಿಶ್ವದ ಇತರ ಕುಬ್ಜರನ್ನು ಖಗೇಂದ್ರ ಭೇಟಿಯಾಗಿದ್ದರು. (ಎಂ.ಎನ್)

Leave a Reply

comments

Related Articles

error: