ದೇಶಪ್ರಮುಖ ಸುದ್ದಿ

ಬರಲಿದೆ 10 ರೂಪಾಯಿಯ ಹೊಸ ನೋಟು ; ಹಳೆಯ ನೋಟುಗಳ ನಿಷೇಧವಿಲ್ಲ

ಮುಂಬೈ : 500-1000 ಮುಖಬೆಲೆಯ ನೋಟು ನಿಷೇಧ ಮಾಡಿ ಹೊಸ ನೋಟುಗಳನ್ನು ಬಿಡುಗಡೆ ಮಾಡಿದ್ದಾಯಿತು. ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ ಹೊಸ 10 ರೂ. ನೋಟುಗಳನ್ನು ಬಿಡುಗಡೆ ಮಾಡಲಿದೆ ಎಂದು ತಿಳಿದುಬಂದಿದೆ.

ಹೆಚ್ಚು ಸುರಕ್ಷತಾ ಕ್ರಮಗಳನ್ನು ಹೊಂದಿರುವ ಹೊಸ 10 ರುಪಾಯಿ ನೋಟುಗಳು ಚಲಾವಣೆಗೆ ಬರಲಿದ್ದು, ಹಳೆಯ ಹತ್ತು ರೂಪಾಯಿ ನೋಟುಗಳೂ ಚಲಾವಣೆಯಲ್ಲಿರಲಿವೆ.

ಹೊಸದಾಗಿ ಮುದ್ರಣಗೊಳ್ಳುವ 10 ರುಪಾಯಿ ನೋಟುಗಳಲ್ಲಿ ಸಂಖ್ಯೆಗಳ ಜತೆ L ಅಕ್ಷರ ಇರಲಿದೆ.  ಆರ್‌ಬಿಐ ಗವರ್ನರ್ ಉರ್ಜಿತ್ ಪಟೇಲ್ ಅವರ ಸಹಿಯೊಂದಿಗೆ ಹೊಸ ನೋಟಿನಲ್ಲಿ 2017 ಎಂದು ಮುದ್ರಿಸಲಾಗುತ್ತದೆ.

ನೋಟಿನ ಎರಡೂ ಬದಿಯಲ್ಲಿರುವ ಸಂಖ್ಯೆಗಳ ಗಾತ್ರ ಬದಲಾಗಲಿದೆ. ಸಂಖ್ಯೆಗಳು ಎಡಭಾಗದಲ್ಲಿ ಸಣ್ಣದಿದ್ದರೆ ಬಲಭಾಗಕ್ಕೆ ದೊಡ್ಡದಿರಲಿದೆ. ಎಡಭಾಗದ ಮೊದಲ ಮೂರು ಸಂಖ್ಯೆಗಳು ಮಾತ್ರ ಸಮಾನ ಗಾತ್ರ ಹೊಂದಿರಲಿವೆ ಆರ್‌ಬಿಐ ತಿಳಿಸಿದೆ.

(ಎನ್‍ಬಿಎನ್‍)

Leave a Reply

comments

Related Articles

error: