ಕ್ರೀಡೆ

ಹೊಬರ್ಟ್ ಇಂಟರ್ ನ್ಯಾಷನಲ್ ಟೆನ್ನಿಸ್ ಟೂರ್ನಿ: ಡಬಲ್ಸ್ ನಲ್ಲಿ ಸಾನಿಯಾ ಮಿರ್ಜಾ, ನದಿಯಾ ಕಿಚ್ನಾಕ್ ಗೆ ಪ್ರಶಸ್ತಿ

ನವದೆಹಲಿ,ಜ.18- ಹೊಬರ್ಟ್ ಇಂಟರ್ ನ್ಯಾಷನಲ್ ಟೆನ್ನಿಸ್ ಟೂರ್ನಿಯಲ್ಲಿ ಭಾರತದ ಸಾನಿಯಾ ಮಿರ್ಜಾ, ಉಕ್ರೈನ್ ನ ನದಿಯಾ ಕಿಚ್ನಾಕ್ ಅವರೊಂದಿಗೆ ಮಹಿಳೆಯರ ಡಬಲ್ಸ್ ವಿಬಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಇಂದು ನಡೆದ ಮಹಿಳೆಯರ ಡಬಲ್ಸ್ ಫೈನಲ್ ಹಣಾಹಣಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ಸಾನಿಯಾ ಮಿರ್ಜಾ ಹಾಗೂ ನದಿಯಾ ಕಿಚ್ನಾಕ್ ಜೋಡಿಯು 6-4, 6-4 ಅಂತರದಲ್ಲಿ ನೇರ ಸೆಟ್ ಗಳಿಂದ ಚೀನಾದ ಝಾಂಗ್ ಶುಯಿ ಮತ್ತು ಪೆಂಗ್ ಶುಯಿ ಜೋಡಿಯ ವಿರುದ್ಧ ಜಯ ಸಾಧಿಸಿದರು.

ಸಾನಿಯಾ ಹಾಗೂ ನದಿಯಾ ಜೋಡಿ ಎದುರಾಳಿ ಚೀನಾ ಜೋಡಿಯನ್ನು ಪುಟಿದೇಳಲು ಅವಕಾಶ ನೀಡಲೇ ಇಲ್ಲ. ಸುಲಭವಾಗಿ ಅವರ ವಿರುದ್ಧ ಜಯ ಸಾಧಿಸಿದರು. ಇದಕ್ಕೂ ಮುನ್ನ ನಿನ್ನೆ ನಡೆದ ಸೆಮಿಫೈನಲ್ ಹಣಾಹಣಿಯಲ್ಲಿ ಮರಿಯಾ ಮತ್ತು ತಮರ ಜೋಡಿಯ ವಿರುದ್ಧ 7-6, 6-2 ಅಂತರದಲ್ಲಿ ಗೆಲುವು ಸಾಧಿಸಿತ್ತು.

ಸಾನಿಯಾ ಮಿರ್ಜಾ ಈ ಗೆಲುವಿನ ಮೂಲಕ 2017ರ ಬಳಿಕ ಆಡಿದ ಮೊದಲ ಟೂರ್ನಿಯಲ್ಲೇ ಸಾನಿಯಾ ಮಿರ್ಜಾ ಗೆಲುವಿನ ಆರಂಭ ಕಂಡಿದ್ದಾರೆ.

ಸಾನಿಯಾ ಮಿರ್ಜಾ ಅವರು 2017ರ ಅಕ್ಟೋಬರ್ ನಲ್ಲಿ ಚೀನಾ ಓಪನ್ ನಲ್ಲಿ ಕೊನೆಯ ಬಾರಿ ಆಡಿದ್ದರು. ತಮ್ಮ ಪುತ್ರನ ಜನನದಿಂದಾಗಿ ದೀರ್ಘಕಾಲ ವಿಶ್ರಾಂತಿ ಪಡೆದಿದ್ದರು. ಇದಕ್ಕೂ ಮುನ್ನ 2019ರ ಡಿಸೆಂಬರ್ ನಲ್ಲಿ ಫೆಡ್ ಕಪ್ ಟೂರ್ನಿಯಲ್ಲಿ ಭಾರತದ ಪರ ಆಡಿದ್ದರು. (ಎಂ.ಎನ್)

Leave a Reply

comments

Related Articles

error: