ಮೈಸೂರು

ಗಾಂಧಿ ಶಿಲ್ಪ ಬಜಾರ್ ಸೆ.29ರಿಂದ

dscn2259-ewebದಸರಾ ಹಬ್ಬದ ಪ್ರಯುಕ್ತ ದೇಶದ ಮೂಲೆ ಮೂಲೆಗಳಿಂದ ಕುಶಲಕರ್ಮಿಗಳು ಮೈಸೂರಿಗೆ ಆಗಮಿಸಿದ್ದಾರೆ. ಕರ್ನಾಟಕ ರಾಜ್ಯ ಸರಕಾರ ಕರಕುಶಲ ಅಭಿವೃದ್ಧಿ ನಿಗಮ ನಿಯಮಿತ ಮತ್ತು ಭಾರತ ಸರಕಾರದ ಜವಳಿ ಸಚಿವಾಲಯದ ಅಭಿವೃದ್ಧಿ ಆಯುಕ್ತರು ‘ಗಾಂಧಿ ಶಿಲ್ಪ ಬಜಾರ್‍’ ಕಾರ್ಯಕ್ರಮ ಆಯೋಜಿಸಿದ್ದಾರೆ.

ಹೆಬ್ಬಾಳದಲ್ಲಿರುವ ಅರ್ಬನ್ ಹಾಥ್‍ಗೆ ಆಗಮಿಸಿದ ಕುಶಲಕರ್ಮಿಗಳು ಮರದ ಆಟಿಕೆಗಳು ಮತ್ತು ವಿವಿಧ ಉಪಕರಣಗಳು, ಮಣ್ಣಿನ ಮೂರ್ತಿಗಳು, ವಿವಿಧ ರೀತಿಯ ಬಟ್ಟೆಗಳು, ಆಭರಣ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ.

ಕೆಲ ಕುಶಲಕರ್ಮಿಗಳು ನಿರ್ಮಿಸಿದ ವಿಶಿಷ್ಟ ಮಾದರಿಯ ಕುಂಬಾರಿಕೆ ವಸ್ತುಗಳು, ಕೈಯಿಂದ ತಯಾರಿಸಿದ ಮನೆ ಅಲಂಕಾರಿಕ ವಸ್ತುಗಳು ಗಮನಸೆಳೆಯುತ್ತಿವೆ. ಇನ್ನು, ಮರದ ಕೆಲಸ ಮಾಡುವ ಕಲಾವಿದರು ನಿರ್ಮಿಸಿರುವ ಮರದ ಕೆತ್ತನೆಗಳು, ಪರಿಕರಗಳು ನೋಡುಗರನ್ನು ಆಕರ್ಷಿಸುತ್ತಿವೆ.

ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿಗಳನ್ನು ಗಳಿಸಿರುವ ಕಲಾವಿದರು ಕಲೆ ಮತ್ತು ಕರಕುಶಲ ಕಲೆ ತಯಾರಿಕೆ ಬಗ್ಗೆ ನೇರ ಪ್ರದರ್ಶನ ಕೂಡ ನೀಡಲಿದ್ದಾರೆ. ಕಸೂತಿ ಸಾರಿ, ತುಸ್ಸಾರ್ ರೇಷ್ಮೆ ಸಾರಿ, ಕಾಂತ ಹೊಲಿಗೆ ಸೀರೆ, ಬನಾರಸ್ ಸೀರೆ, ಉಡುಗೆಗಳು, ಬೂಟಿಕ್ ಸೀರೆ ಮತ್ತು ಬಟ್ಟೆಗಳು, ಬಂಗಾಳಿ ಕಾಟನ್ ಸೀರೆಗಳ ಪ್ರದರ್ಶನ ನಡೆಯಲಿದೆ. ಅಲ್ಲದೆ, ಕಾಶ್ಮೀರಿ ಹ್ಯಾಂಡ್‍ಲೂಮ್ಸ್, ಸಹರನ್ಪುರ್‍ನ ಮರದ ಪಿಠೋಪಕರಣಗಳು, ಮರದ ಕೆತ್ತನೆಗಳು, ಕಸೂತಿಗಳು, ಆಧುನಿಕ ಕಲೆಯ ಭಿತ್ತಿಚಿತ್ರಗಳು, ಪಿಂಗಾಣಿ, ಮಧುರೈ ಪೈಂಟಿಂಗ್‍ಗಳು, ರಾಜಸ್ಥಾನಿ ಚಿತ್ರಕಲೆಗಳು, ಕಸೂತಿ ಕಲೆ ಮತ್ತು ಪಾದರಕ್ಷೆಗಳು, ಗುಜರಾತಿ ಬಟ್ಟೆಗಳು, ಒಣಗಿದ ಹೂವುಗಳು, ಚರ್ಮದಿಂದ ತಯಾರಿಸಿದ ಸಾಮಗ್ರಿಗಳು, ಸೆಣಬಿನಿಂದ ತಯಾರಿಸಿದ ವಸ್ತುಗಳು, ಮಾರ್ಬಲ್ ಪೈಂಟಿಂಗ್, ಕರ್ನಾಟಕ ರೇಷ್ಮೆ ಸೀರಿಗಳು, ಚನ್ನಪಟ್ಟಣದ ಗೊಂಬೆಗಳು ಕೂಡ ಪ್ರದರ್ಶನಗೊಳ್ಳಲಿವೆ.
ಸೆಪ್ಟೆಂಬರ್ 29ರಿಂದ ಅಕ್ಟೋಬರ್ 9ರವರೆಗೆ ಬೆಳಗ್ಗೆ 10 ಗಂಟೆಯಿಂದ 9ರವರೆಗೆ ಪ್ರದರ್ಶನ ನಡೆಯಲಿದೆ. ಸೆ.29ರಂದು ಮೈಸೂರು ನಗರ ಪಾಲಿಕೆ ಮೇಯರ್ ಬಿ.ಎಲ್. ಭೈರಪ್ಪ ಉದ್ಘಾಟಿಸಲಿದ್ದು, ಸಂಸದ ಪ್ರತಾಪ್ ಸಿಂಹ ಅಧ್ಯಕ್ಷತೆ ವಹಿಸಲಿದ್ದಾರೆ.

Leave a Reply

comments

Tags

Related Articles

error: