ಕ್ರೀಡೆಪ್ರಮುಖ ಸುದ್ದಿ

ಸ್ಮಿತ್ ವಿರುದ್ಧ ಯಾಕೆ ಶಿಸ್ತುಕ್ರಮ ಕೈಗೊಂಡಿಲ್ಲ : ಐಸಿಸಿಯನ್ನು ಪ್ರಶ್ನಿಸಿದ ಗವಾಸ್ಕರ್

ನವದೆಹಲಿ : ಡಿಆರ್‍ಎಸ್ ವಿವಾದದಲ್ಲಿ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಯಾವುದೇ ಶಿಸ್ತುಕ್ರಮ ಕೈಗೊಳ್ಳದಿರುವುದಕ್ಕೆ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಪ್ರಶ್ನಿಸಿದ್ದಾರೆ.

ಐಸಿಸಿ ವಿರುದ್ಧ ತೀವ್ರ ಕಿಡಿಕಾರಿರುವ ಅವರು, ಸ್ಮಿತ್ ಮಾಡಿದಂತೆ ಭಾರತದ ನಾಯಕ ವಿರಾಟ್ ಕೊಹ್ಲಿ ಸಹ ಮುಂದಿನ ಪಂದ್ಯದಲ್ಲಿ ಡಿಆರ್‍ಎಸ್‍ಗೆ ಅಪೀಲ್ ಮಾಡುವ ಮುನ್ನ ಪೆವಿಲಿಯನ್ ಕಡೆ ತಿರುಗಿದರೆ ಅದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲವೆ? ಐಸಿಸಿ ಎಲ್ಲ ದೇಶದ ಕ್ರಿಕೆಟ್ ತಂಡಗಳನ್ನೂ ಒಂದೇ ರೀತಿ ಕಾಣಬೇಕು. ದೇಶಕ್ಕೊಂದು ನೀತಿ ಅನುಸರಿಸಬಾರದು ಎಂದು ಗವಾಸ್ಕರ್ ಕಿಡಿಕಾರಿದ್ದಾರೆ.

(ಎನ್‍ಬಿಎನ್‍)

Leave a Reply

comments

Related Articles

error: