ಕ್ರೀಡೆ

ರೋಹಿತ್ ಶರ್ಮಾ ಗಾಯದ ಸಮಸ್ಯೆ ಬಗ್ಗೆ ಮಾತನಾಡಿದ ವಿರಾಟ್ ಕೊಹ್ಲಿ

ರಾಜ್‌ಕೋಟ್‌,ಜ.18-ಆಸ್ಟ್ರೇಲಿಯಾ ವಿರುದ್ಧ ನಿನ್ನೆ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ಗಾಯಗೊಂಡಿದ್ದಾರೆ. ಫೀಲ್ಡಿಂಗ್‌ ವೇಳೆ ಬೌಂಡರಿ ಗೆರೆ ಮುಟ್ಟುತ್ತಿದ್ದ ಚೆಂಡನ್ನು ತಡೆಯುವ ಪ್ರಯತ್ನದಲ್ಲಿ ರೋಹಿತ್ ಭುಜಕ್ಕೆ ಪೆಟ್ಟಾಗಿದೆ.

ಈ ಬಗ್ಗೆ ಮಾತನಾಡಿರುವ ವಿರಾಟ್ ಕೊಹ್ಲಿ, ರೋಹಿತ್‌ ಎಡ ಭುಜಕ್ಕೆ ಪೆಟ್ಟಾಗಿದೆ ಆದರೆ ಗಂಭೀರ ಸ್ವರೂಪದ್ದೇನಲ್ಲ. ಭಾನುವಾರ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಸರಣಿ ನಿರ್ಣಾಯಕ ಪಂದ್ಯದಲ್ಲಿ ರೋಹಿತ್ ಆಡುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ರೋಹಿತ್ ಅವರ ಎಡ ಭುಜದ ಮೂಳೆ ಕೊಂಚ ಸರಿದಿತ್ತು. ಆದರೆ, ದೀರ್ಘ ಕಾಲ ವಿಶ್ರಾಂತಿ ಪಡೆಯುವಂತಹ ಯಾವುದೇ ಗಾಯದ ಸಮಸ್ಯೆ ಎದುರಾಗಿಲ್ಲ. ಮಾಂಸಖಂಡಗಳಲ್ಲಿ ಯಾವುದೇ ಹರಿತ ಸಂಭವಿಸಿಲ್ಲ. ಭಾನುವಾರದ ಪಂದ್ಯವಾಡಲು ಅವರು ಫಿಟ್‌ ಆಗಲಿದ್ದಾರೆ ಎಂದು ಭಾವಿಸಿದ್ದೇನೆ ಎಂದಿದ್ದಾರೆ.

ನಿನ್ನೆ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ, ಆಸೀಸ್ ವಿರುದ್ಧ 36 ರನ್ ಗಳ ಭರ್ಜರಿ ಜಯ ಸಾಧಿಸಿದೆ. ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 340 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ್ದ ಆಸೀಸ್ 304 ರನ್‌ಗಳಿಗೆ ಆಲ್‌ಔಟ್‌ ಆಯಿತು. 3 ಪಂದ್ಯಗಳ ಸರಣಿ ಇದೀಗ 1-1ರಲ್ಲಿ ಸಮಬಲಗೊಂಡಿದೆ. (ಎಂ.ಎನ್)

Leave a Reply

comments

Related Articles

error: