ಮೈಸೂರು

ಜ.20ರಿಂದ ನುರಿತ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

ಮೈಸೂರು, ಜ.18:- ನಗರದ ರೋಟರಿ ಐವರಿ ಸಿಟಿ, ರೋಟರಿ ಇ-ಕ್ಲಬ್, ಬೆಂಗಳೂರು, ಕೋರಮಂಗಲ ಚಾರಿಟಬಲ್ ಟ್ರಸ್ಟ್ ಹಾಗೂ ಮೆಡಿಕಲ್ ಆಪ್ಟಿಕಲ್ ಏಡ್ ಇವರ ಸಂಯುಕ್ತಾಶ್ರಯದಲ್ಲಿ ಜ.20ರಿಂದ 23ರವರೆಗೆ ಬೆಳಿಗ್ಗೆ 8.30ರಿಂದ ಮಧ್ಯಾಹ್ನ 2.30ರವರೆಗೆ ಜಯಲಕ್ಷ್ಮೀಪುರಂನ 3ನೇ ಹಂತ 4ನೇ ಮುಖ್ಯ ರಸ್ತೆಯಲ್ಲಿರುವ ಶ್ರೀ ಸತ್ಯಸಾಯಿಬಾಬಾ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಆರೋಗ್ಯ ಶಿಬಿರದಲ್ಲಿ ಇಂಗ್ಲೆಂಡಿನ ನೇತ್ರ ತಜ್ಞರಾದ ಕಾಂತಿಲಾಲ್ ಮಿಸ್ತ್ರಿ ಮತ್ತು ತಂಡದವರು ಕಣ್ಣಿನ ತಪಾಸಣೆಯನ್ನು ನಡೆಸುವರು. ಇಂಗ್ಲೆಂಡಿನ ತಜ್ಞ ವೈದ್ಯರಾದ ಡಾ.ರಮಣ ಗೋವಿಂದರಾಜು ಮತ್ತು ತಂಡದವರು ಉಚಿತ ಸಾಮಾನ್ಯ ರೋಗಗಳ ತಪಾಸಣಾ ಶಿಬಿರವನ್ನು ನಡೆಸಿಕೊಡುತ್ತಾರೆ.
ಈ ಆರೋಗ್ಯ ಶಿಬಿರದಲ್ಲಿ ಉಚಿತ ಕಣ್ಣಿನ ಪರೀಕ್ಷೆ ಮತ್ತು ಕನ್ನಡಕದ ಪರೀಕ್ಷೆ, ಅಗತ್ಯವಿರುವ ಔಷಧಿಗಳನ್ನು ಉಚಿತವಾಗಿ ಕೊಡುವುದು, ದೇಹದ ಸಾಮಾನ್ಯ ಪರೀಕ್ಷೆ ಮತ್ತು ತಪಾಸಣೆ ಮತ್ತು ಅದಕ್ಕೆ ಉಚಿತ ಔಷದಿ ಸ್ಥಳದಲ್ಲಿಯೇ ವಿತರಣೆ, ಇದಲ್ಲದೇ ಅಗತ್ಯವಿದ್ದಲ್ಲಿ ಹೆಚ್ಚಿನ ಶಸ್ತ್ರ ಚಿಕಿತ್ಸೆ ರಿಯಾಯಿತಿ ದರದಲ್ಲಿಯೂ ಕೂಡ ಮಾಡಿಕೊಡಲಾಗುವುದು. ಈ ಆರೋಗ್ಯ ಶಿಬಿರದ ಮೂಲ ಉದ್ದೇಶ ಬಡ ಹಾಗೂ ಅಶಕ್ತ ಜನರು ಆರೋಗ್ಯ ಶಿಬಿರದಲ್ಲಿ ಭಾಗವಹಿಸಿ ಉಚಿತ ಸೇವೆಯನ್ನು ಸದುಪಯೋಗಪಡಿಸಿಕೊಳ್ಳುವುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಡಾ.ರವಿಶಂಕರ್, ಮೊಬೈಲ್ 9845971425 ಇವರನ್ನು ಸಂಪರ್ಕಿಸಬಹುದು. (ಎಸ್.ಎಚ್)

Leave a Reply

comments

Related Articles

error: