ಮೈಸೂರು

ಪವರ್ ಗ್ರಿಡ್   ವಿರೋಧಿಸಿ ರೈತರ ಪ್ರತಿಭಟನೆ

ಮೈಸೂರು,ಜ.19:- ಇಲವಾಲ ಹೋಬಳಿಯ ರೈತರಿಗೆ ಜಿಲ್ಲಾಧಿಕಾರಿಗಳು ಸಂಕ್ರಾಂತಿ ಹಬ್ಬದ ನಂತರ ಸಭೆ ಸೇರಿ ಪವರ್ ಗ್ರಿಡ್ ಸಮಸ್ಯೆ ಬಗೆಹರಿಸುವ ಮಾತನ್ನು ಆಡಿದ್ದರು.

ಇಂದು ಏಕಾಏಕಿ 250 ಪೊಲೀಸ್ ರನ್ನು ಕರೆತಂದು ಪವರ್ ಗ್ರಿಡ್   ಕೆಲಸವನ್ನು ಮಾಡುತ್ತಿರುವುದನ್ನು ಖಂಡಿಸಿ  ರೈತ ಸಂಘ ಸ್ಥಳೀಯ ರೈತರ ಸಮ್ಮುಖದಲ್ಲಿ ಸ್ಥಳದಲ್ಲಿಯೇ ಪ್ರತಿಭಟನೆ ನಡೆಸಿವೆ.

ಪ್ರತಿಭಟನೆಯಲ್ಲಿ  ತಾಲೂಕು ಅಧ್ಯಕ್ಷ  ಪಿ.ಮರಂಕಯ್ಯ, ಮುಖಂಡ ಚಂದ್ರೇಗೌಡ, ಪ್ರಭಾಕರ್, ಮಂಡಕಳ್ಳಿ ಮಹೇಶ್, ಚಂದ್ರಶೇಖರ್, ರಾಘವೇಂದ್ರ, ಬಾಲು ನೂರಾರು ರೈತರು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: