ದೇಶಪ್ರಮುಖ ಸುದ್ದಿ

ರಾಜನಾಥ್ ಸಿಂಗ್‍ಗೆ ಹತನಾದ ಶಂಕಿತ ಉಗ್ರನ ತಂದೆಯಿಂದ ಧನ್ಯವಾದ

ನವದೆಹಲಿ/ಲಖ್ನೋ : ಉತ್ತರಪ್ರದೇಶದಲ್ಲಿ ಭದ್ರತಾಪಡೆಗಳಿಂದ ಹತನಾದ ಶಂಕಿತ ಉಗ್ರ ಸೈಫುಲ್ಲಾ ಮೃತದೇಹ ಪಡೆಯಲು ನಿರಾಕರಿಸಿದ ಆತನ ತಂದೆ ಸರ್ತಾಜ್ ಮೊಹಮ್ಮದ್, ಕೇಂದ್ರ ಸಚಿವ ರಾಜನಾಥ್ ಸಿಂಗ್‍ ಅವರಿಗೆ ಧನ್ಯವಾದ ಹೇಳಿದ್ದಾರೆ.

ಇದಕ್ಕೂ ಮೊದಲು ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಸರ್ತಾಜ್ ಅವರ ನಿಲುವು ದೇಶವೇ ಹೆಮ್ಮೆಪಡುವಂಥದ್ದು, ಸರ್ಕಾರ ಅವರನ್ನು ಗೌರವದಿಂದ ಕಾಣುತ್ತದೆ. ಓರ್ವ ಭಾರತೀಯನಾಗಿ ಸರ್ತಾಜ್‍ ಅವರ ನಡೆ ಅಭಿನಂದನಾರ್ಹ ಎಂದು ಶ‍್ಲಾಘಿಸಿದ್ದರು.

ಸಚಿವರ ಹೇಳಿಕೆಯ ಬಗ್ಗೆ ಕಾನ್ಪುರದಲ್ಲಿ ಪ್ರತಿಕ್ರಿಯಿಸಿರುವ ಸರ್ತಾಜ್ ಮೊಹಮ್ಮದ್, ರಾಜನಾಥ್ ಸಿಂಗ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಇದು ದೇಶಕ್ಕೆ ಒಂದು ಸಂದೇಶವಾಗಬೇಕು. ಇಂತಹ ಸಚಿವರಿಗೆ ಸಾಮಾನ್ಯ ಜನರಾದ ನಾವು ಗೌರವ ನೀಡಬೇಕು ಎಂದಿದ್ದಾರೆ.

ನಮ್ಮ ಪೂರ್ವಜರು ಹುಟ್ಟಿದ್ದು ಇದೇ ನಾಡಲ್ಲಿ, ನಾನು ಹುಟ್ಟಿದ್ದು ಇಲ್ಲೆ, ನಾವು ಭಾರತೀಯರು. ಇಲ್ಲೆ ಹುಟ್ಟಿ ಬೆಳೆದು ದೇಶದಲ್ಲಿ ಭಯೋತ್ಪಾದನೆ ಕೃತ್ಯ ನಡೆಸಿದ ಆತ ನನ್ನ ಮಗನಾಗಲು ಸಾಧ್ಯವಿಲ್ಲ. ಆತನ ಭಯೋತ್ಪಾದನೆಯ ಕೃತ್ಯಗಳು ನನಗೆ ತಿಳಿದಿರಲಿಲ್ಲ. ಹೀಗಾಗಿ ನಾನು ಆತನ ಮೃತದೇಹ ಸ್ವೀಕರಿಸಲ್ಲ ಎಂದು ನಿನ್ನೆ ಸರ್ತಾಜ್ ಹೇಳಿದ್ದರು.

Leave a Reply

comments

Related Articles

error: