ದೇಶಪ್ರಮುಖ ಸುದ್ದಿ

ನಿಮ್ಮ ‘ಜಾತ್ಯಾತೀತ ವ್ಯಾಪಾರ’ ನಿಲ್ಲಿಸಿ : ಮೋದಿ ಬಗ್ಗೆ ಟೀಕಿಸಿದ್ದ ಕಾಂಗ್ರೆಸ್‍ಗೆ ತಿವಿದ ಓವೈಸಿ !

ನವದೆಹಲಿ : ಕಾಂಗ್ರೆಸ್ ಪಕ್ಷ ಜಾತ್ಯತೀತ ವ್ಯಾಪಾರವನ್ನು ನಿಲ್ಲಿಸಬೇಕು ಎಂದು ಅಖಿಲ ಭಾರತ ಮಜಲಿಸ್ ಇತ್ತೆಹಾದುಲ್ ಮುಸ್ಲಿಮೀನ್ ಮುಖಂಡ ಅಸಾದುದ್ದೀನ್ ಓವೈಸಿ ಆಗ್ರಹಿಸಿದ್ದಾರೆ.

“ಮೋದಿ ಸರ್ಕಾರದ ಅವಧಿಯಲ್ಲಿ ಭಾರತೀಯ ಮುಸ್ಲಿಮರಿಗೆ ವಿಮುಖತೆ ಕಾಡುತ್ತಿದೆ ಎಂಬ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರ ಹೇಳಿಕೆಯ ಕುರಿತು ಪ್ರತಿಕ್ರಿಯೆ ನೀಡಿರುವ ಓವೈಸಿ, ಕಾಂಗ್ರೆಸ್ ಆಡಳಿತ ಸಮಯದಲ್ಲಿಯೂ ಮುಸ್ಲಿಮರು ಹೆಚ್ಚು ತೊಂದರೆಗಳನ್ನು ಎದುರಿಸುತ್ತಿದ್ದರು ಎಂದು ತಿರುಗೇಟು ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿ 15 ವರ್ಷಗಳ ಕಾಲ ಕಾಂಗ್ರೆಸ್ ಆಡಳಿತ ನಡೆಸಿತು. ವಿಚಾರಣೆ ಕಾರಣದಿಂದ ಜೈಲಿನಲ್ಲಿದ್ದ 28 ಮುಸ್ಲೀಮರು ಅಲ್ಲೇ ಕೊಳೆಯುವಂತಾಯಿತು. ಔರಂಗಾಬಾದ್ ಶಸ್ತ್ರಾಸ್ತ್ರ ಪ್ರಕರಣ, ಮಾಲೆಗಾಂವ್ ಪ್ರಕರಣ ಮತ್ತು 7/11 ರೈಲು ಸ್ಫೋಟ.. ಇವೆಲ್ಲವೂ ಕಾಂಗ್ರೆಸ್‍ ಅಧಿಕಾರದಲ್ಲಿದ್ದ ಸಮಯದಲ್ಲೇ ನಡೆದಿವೆ. ಇನ್ನೂ ಅನೇಕ ಪ್ರಕರಣಗಳನ್ನು ಉದಾಹರಣೆ ಕೊಡಬಹುದು. ನಾನು ಭಯೋತ್ಪಾದಕ ತಜ್ಞನಲ್ಲ. ದಿಗ್ವಿಜಯ್ ಸಿಂಗ್ ತಜ್ಞರಂತೆ ಮಾತನಾಡುತ್ತಿದ್ದಾರೆ. ಭಯೋತ್ಪಾದನೆ ಹೆಸರಿನಲ್ಲಿ ರಾಜಕೀಯ ಮಾಡಬಾರದು ಎಂದು ಓವೈಸಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಇದರ ಜೊತೆ ಬಿಜೆಪಿಯನ್ನೂ ಟೀಕಿಸಿದ ಓವೈಸಿ, ಬಿಜೆಪಿ ರಾಷ್ಟ್ರಪ್ರೇಮದ ಹೆಸರಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

(ಎನ್‍.ಬಿ.ಎನ್‍)

Leave a Reply

comments

Related Articles

error: