ಮೈಸೂರು

ಉಳ್ಳವರಿಂದ ಅವಶ್ಯಕತೆಯಿರುವವರಿಗಾಗಿ ಕುರಿ ನೀಡುವ ಯೋಜನೆ : ಎಸ್.ಪ್ರಕಾಶ್ ಪ್ರಿಯಾದರ್ಶನ್

ಮೈಸೂರು,ಜ.20:- ಎಸ್.ಪ್ರಕಾಶ್ ಪ್ರಿಯಾದರ್ಶನ ಸ್ನೇಹ ಬಳಗದ ವತಿಯಿಂದ ಶುದ್ಧ ಗಾಳಿ, ಶುದ್ಧ ನೀರು, ಶುದ್ಧ ಮನಸ್ಸಿನ ಶುದ್ಧ ಬದುಕಿನ ಕಡೆ ನಮ್ಮ ನಡೆ ಘೋಷ ವಾಕ್ಯದೊಂದಿಗೆ ಉಳ್ಳವರಿಂದ ಅವಶ್ಯಕತೆಯಿರುವವರಿಗಾಗಿ ಕುರಿ ನೀಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಾಧ್ಯಕ್ಷ ಎಸ್.ಪ್ರಕಾಶ್ ಪ್ರಿಯಾದರ್ಶನ್ ತಿಳಿಸಿದರು.

ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕುರುಬರಿಂದ ಕುರುಬರಿಗಾಗಿ, ಉಳ್ಳವರಿಂದ ಅವಶ್ಯಕತೆಯಿರುವವರಿಗಾಗಿ ಎಂಬ  ಕಾರ್ಯಕ್ರಮವು ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ನಮ್ಮ ಸಮಾಜದ ಆರ್ಥಿಕವಾಗಿ ಹಿಂದುಳಿದ ಬಂಧುಗಳಿಗೆ ಕುರಿಮರಿಗಳನ್ನು ವಿತರಿಸುವ ಮೂಲಕ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿ ಶ್ರಮ ವಹಿಸುವುದಾಗಿದೆ ಎಂದರು.

ಈ ಕಾರ್ಯಕ್ರಮವು 30-01-2020 ರಂದು ಬೆಳ್ಳಿಗೆ 10.30ಕ್ಕೆ ಜೆ.ಎಲ್.ಬಿ ರಸ್ತೆಯಲ್ಲಿರುವ ಆರಾಧ್ಯ ಮಹಾಸಭಾದಲ್ಲಿ ನಡೆಯಲ್ಲಿದ್ದು ಫಲಾನುಭವಿಗಳ ಆಯ್ಕೆಯನ್ನು ಲಾಟರಿ ಎತ್ತುವ ಮೂಲಕ ಕುರಿಮರಿಗಳನ್ನು ವಿತರಿಸಲಾಗುವುದು. ಅರ್ಜಿಗಳನ್ನು 21-01-2020ರಿಂದ 23-01-2020ರವರೆಗೆ ವಿತರಿಸಲಾಗುವುದು. ಅರ್ಜಿಯನ್ನು ಸಲ್ಲಿಸಲು ಕಡೇ ದಿನಾಂಕ  25-01-2020 ಆಗಿದೆ. ಈ ಕಾರ್ಯಕ್ರಮವನ್ನು 5 ವರ್ಷಗಳ ಕಾಲ ಪ್ರತಿ ತಿಂಗಳ ಕೊನೆ ವಾರದಲ್ಲಿ ನಡೆಸಲಾಗುವುದು ಎಂದರು.

ಈ ಸಮಾಜಮುಖಿ ಕಾರ್ಯಕ್ಕೆ ಸಮಾಜದ ಹಾಗೂ ಶ್ರೀಮಂತ ವ್ಯಕ್ತಿಗಳು ತಮ್ಮಗಳ ಜನ್ಮದಿನ ಹಾಗೂ ವಿವಾಹವಾರ್ಷಿಕೋತ್ಸವ ಮತ್ತು ಇನ್ನಿತರ ಶುಭದಿನಗಳಲ್ಲಿ ಕುರಿಮರಿಗಳನ್ನು ಈ ಕಾರ್ಯಕ್ರಮಕ್ಕೆ ಕೊಡುವ ಮೂಲಕ ಸಹಾಯ ಹಸ್ತ ಚಾಚಬೇಕಾಗಿ ವಿನಂತಿಸಿದರು.

ಈಗಾಗಲೇ ಎಸ್. ಪ್ರಕಾಶ ಪ್ರಿಯಾದರ್ಶನ್ ಸ್ನೇಹ ಬಳಗದಿಂದ ಕೆ.ಆರ್‌. ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ವಿವಿಧ ಆಶ್ರಮಗಳಿಗೆ ಪ್ರತಿ ಗುರುವಾರದಂದು ಹಣ್ಣುಗಳನ್ನು ವಿತರಿಸುವ 59  ಕಾರ್ಯಕ್ರಮಗಳನ್ನು ನಡೆಸಿದ್ದು, ಮುಂದಿನ ದಿನಗಳಲ್ಲಿ ಕೆ.ಆರ್, ಕ್ಷೇತ್ರ ವ್ಯಾಪ್ತಿಯಲ್ಲಿ ಬಡ ವ್ಯಾಪಾರಿಗಳಿಗೆ ಶುದ್ದ ಕುಡಿಯುವ ನೀರನ್ನು ಉಪಯೋಗಿಸಲು 20ಲೀಟರ್‌ನ ವಾಟರ್ ಕ್ಯಾನ್ ನ್ನು ಉಚಿತವಾಗಿ ನೀಡಲಾಗುವುದು. 30/01/2020ರ ಕಾರ್ಯಕ್ರಮಕ್ಕೆ ಈವರೆಗೆ 5 ಕುರಿಮರಿಗಳು ಸಂಗ್ರಹವಾಗಿದ್ದು, ಒಂದನೇ ಕುರಿಮರಿಯನ್ನು ಮಾತೃಶ್ರೀ ಜಯಮ್ಮ ಅವರಿಗೆ, 2ನೇ ಕುರಿಮರಿಯನ್ನು ಓಂಕಾರ ಆನಂದರವರ ಜನ್ಮದಿನಕ್ಕೆ ನೀಡುವ ಮೂಲಕ ಆಚರಿಸಿಕೊಂಡಿದ್ದಾರೆ. 3ನೇ ಕುರಿಮರಿಯನ್ನು ಎಸ್‌ಪ್ರಕಾಶ ಪ್ರಿಯಾದರ್ಶನ್ ಸ್ನೇಹ ಬಳಗದಿಂದ ನೀಡಲಾಗಿದೆ. 4ನೇ ಕುರಿಮರಿಯನ್ನು ಶಿವಕುಮಾರ (ಸಿದ್ದರಾಮಯ್ಯನ ಹುಂಡಿ) 5ನೇ ಕುರಿಮರಿಯನ್ನು   ಗೀರಿಶ್ ಮೆಣ್ಣಸೆಗೌಡ ನೀಡಿದ್ದಾರೆ ಎಂದರು.

ಕಾರ್ಯಕ್ರಮವು 30/01/2020 ರಂದು ನಡೆಯುವುದರಿಂದ ಇನ್ನೂ ಈ ಯೋಜನೆಗೆ  ಕುರಿಮರಿ ನೀಡ ಬಯಸುವ ಬಂಧುಗಳು ಹಾಗೂ ಎಲ್ಲಾ ಸಮಾಜದ ಬಂಧುಗಳು ಸಹಕರಿಸಬೇಕೆಂದರು. ಹೆಚ್ಚಿನ ಮಾಹಿತಿಗಾಗಿ   9916615913, 9632621561 ಸಂಪರ್ಕಿಸಬಹುದು.

ಮೊದಲ ಕಾರ್ಯಕ್ರಮವನ್ನು ಪರಮ ಪೂಜ್ಯ  ಶ್ರೀ ಶಿವನಂದಪುರಿ ಸ್ವಾಮೀಜಿಗಳ ಸಾನಿಧ್ಯದಲ್ಲಿ ನಡೆಸಲಾಗುವುದು. ಮುಖ್ಯ ಅತಿಥಿಗಳಾಗಿ ಡಾ.ಯತೀಂದ್ರ ಸಿದ್ದರಾಮಯ್ಯ, ಶಾಸಕರುಗಳಾದ   ಸಾ.ರಾ.ಮಹೇಶ್, ಎಸ್.ಎ. ರಾಮದಾಸ್  ಮತ್ತಿತರರು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡ ಶಿವಕುಮಾರ್, ಯುವ ಜೆಡಿಎಸ್ ಉಪಾಧ್ಯಕ್ಷ ಎಂ.ದೀಪಕ್, ಸೂರ್ಯ ಮೆಟಲ್ಸ್ ಮಾಲೀಕ ಪಿ.ಗಿರೀಶ್, ಮಂಜು ಎಸ್ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: