ಪ್ರಮುಖ ಸುದ್ದಿಮನರಂಜನೆ

ತಲ್ವಾರ್ ನಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ನಟ ದುನಿಯಾ ವಿಜಯ್ ಗೆ ಸಂಕಷ್ಟ

ರಾಜ್ಯ(ಬೆಂಗಳೂರು)ಜ.20:- ತಲ್ವಾರ್ ನಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ನಟ ದುನಿಯಾ ವಿಜಯ್ ಗೆ ಇದೀಗ ಸಂಕಷ್ಟ ಎದುರಾಗಿದೆ.

ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದ ನಟ ದುನಿಯಾ ವಿಜಯ್ ಕೇಕ್ ನ್ನು ತಲ್ವಾರ್ ನಿಂದ ಕತ್ತರಿಸಿದ್ದು ಈ ಹಿನ್ನೆಲೆಯಲ್ಲಿ ನಟ ದುನಿಯಾ ವಿಜಯ್ ಗೆ ನೋಟೀಸ್ ನೀಡುವಂತೆ ಗಿರಿನಗರ ಠಾಣಾ ಪೊಲೀಸರಿಗೆ ಡಿಸಿಪಿ ರೋಹಿಣಿ ಕಟೋಚ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ನಟ ದುನಿಯಾ ವಿಜಯ್ ಕೇಕ್ ಕಟ್ ಮಾಡಲು ತಲ್ವಾರ್  ಬಳಸಿದ ವಿಡಿಯೋ ವೈರಲ್ ಆಗಿದ್ದು, ದಕ್ಷಿಣ ವಿಭಾಗದ ಡಿಸಿಪಿ ಸೂಚನೆ ಮೇರೆಗೆ ದುನಿಯಾ ವಿಜಯ್ ಗೆ ನೋಟಿಸ್  ನೀಡಲು ಗಿರಿನಗರ ಠಾಣೆ ಪೊಲೀಸರು  ಸಿದ್ಧತೆ ನಡೆಸಿದ್ದಾರೆ. ತಲ್ವಾರ್ ನಿಂದ ಕೇಕ್ ಕಟ್ ಮಾಡಿದ್ದ ಕುರಿತು ನಟ ದುನಿಯಾ ವಿಜಯ್ ಕ್ಷಮೆ ಕೇಳಿದ್ದಾರೆ.  ಈ ಬಗ್ಗೆ ನನಗೆ ಮಾಹಿತಿ ಇಲ್ಲ. ತಪ್ಪಾಗಿದ್ದರೇ ಕ್ಷಮೆಯಾಚಿಸುವುದಾಗಿ ದುನಿಯಾ ವಿಜಯ್ ತಿಳಿಸಿದ್ದಾರೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: