ಮೈಸೂರು

ಮಾನವೀಯ ಮೌಲ್ಯಗಳನ್ನು ಪ್ರಚುರಪಡಿಸಿದ ಕನಕದಾಸರಂತಹ ದಾಸಶ್ರೇಷ್ಠರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ : ಶಾಸಕ ಎಂ.ಅಶ್ವಿನ್‌ಕುಮಾರ್

ಮೈಸೂರು,ಜ.20:-  ಮಾನವೀಯ ಮೌಲ್ಯಗಳನ್ನು ಪ್ರಚುರಪಡಿಸಿದ ಕನಕದಾಸರಂತಹ ದಾಸಶ್ರೇಷ್ಠರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಶಾಸಕ ಎಂ.ಅಶ್ವಿನ್‌ಕುಮಾರ್ ತಿಳಿಸಿದರು.

ಅವರು ನಿನ್ನೆ ತಿ.ನರಸೀಪುರ ಪಟ್ಟಣದ ಶ್ರೀ ಗುಂಜಾನರಸಿಂಹ ದೇವಾಲಯದ ಮುಂಭಾಗ ತಾಲೂಕು ಕುರುಬರ ಸಂಘದಿಂದ ಆಯೋಜಿಸಿದ್ದ ಭಕ್ತ ಕನಕದಾಸ ಜಯಂತ್ಯುತ್ಸವದ ಮೆರವಣಿಗೆ ಸಂದರ್ಭ ನಂದಿಕಂಬಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಜಾತಿರಹಿತವಾದ ಸಮಾಜ ನಿರ್ಮಾಣಕ್ಕೆ ವಾಲ್ಮೀಕಿ, ಕನಕದಾಸರು, ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರು ತಮ್ಮದೇ ಆದ ರೀತಿಯಲ್ಲಿ ಶ್ರಮಿಸಿದ್ದರು. ಇವರೆಲ್ಲರ ಆದರ್ಶ, ತತ್ವ, ಸಂದೇಶಗಳು ಸಂವಿಧಾನದಲ್ಲಿ ಸೇರಿವೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜಾತಿಮುಕ್ತ ಸಮಾಜ ನಿಮಾರ್ಣದ ಜತೆಗೆ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು ಎಂದರು.

ಕಾರ್ಯಕ್ರಮಕ್ಕೆ ವರುಣ ಕ್ಷೇತ್ರದ ಡಾ.ಯತೀಂದ್ರ ಸಿದ್ದರಾಮಯ್ಯ ಚಾಲನೆ ನೀಡಿದರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: