ಮೈಸೂರು

ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದ ರೈತನ ಮೇಲೆ ಕಾಡಾನೆ ದಾಳಿ : ಅಪಾಯದಿಂದ ಪಾರು

ಮೈಸೂರು,ಜ.20:- ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದ ರೈತನ ಮೇಲೆ ಕಾಡಾನೆ ದಾಳಿ ನಡೆಸಿದ್ದು ಸದ್ಯ ರೈತ ಅಪಾಯದಿಂದ ಪಾರಾಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಮನುಗನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ರೈತ ರವಿ ಎಂಬವರ ಮೇಲೆಯೇ ಕಾಡಾನೆ ದಾಳಿ ನಡೆಸಿದೆ. ರವಿ ಸದ್ಯ ಅಪಾಯದಿಂದ ಪಾರಾಗಿದ್ದಾರೆ.   ಕಾಡಾನೆ ದಾಳಿಯಿಂದ ರವಿ ಅವರ ದ್ವಿಚಕ್ರವಾಹನ ಜಖಂ ಆಗಿದೆ.

ಇನ್ನೊಂದೆಡೆ ಹುಣಸೂರು ತಾಲೂಕಿನ ಕಾಳಬೋಚನಹಳ್ಳಿಯಲ್ಲೂ ಸಹ ಒಂಟಿಸಲಗ ದಾಳಿ ಮುಂದುವರೆದಿದೆ. ಕಾಳಬೋಚನಹಳ್ಳಿ ಗ್ರಾಮಕ್ಕೆ ಕಾಡಾನೆ ದಾಳಿ ನಡೆಸಿ ಗ್ರಾಮದಲ್ಲಿ ಅಡ್ಡಾದಿಡ್ಡಿ ಓಡಾಡಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಆನೆ ಬಂದಿದೆ ಎಂದು ಹೇಳಲಾಗುತ್ತಿದೆ. ಕಾಡಾನೆ ದಾಳಿಗೆ ಗ್ರಾಮಸ್ಥರು ಆತಂಕಗೊಂಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: