ಮೈಸೂರು

ಪ್ರಕೃತಿಯಲ್ಲಿ ದೊರೆಯುವ ಶಕ್ತಿಗಳನ್ನು ಸದುಪಯೋಗಪಡಿಸಿಕೊಳ್ಳಿ: ಶ್ಯಾಂ ಸುಂದರ್

ಮೈಸೂರಿನ  ಜೆ.ಎಲ್.ಬಿ ರಸ್ತೆಯಲ್ಲಿರುವ ಇಂಜಿನಿಯರುಗಳ ಸಂಸ್ಥೆಯ ಸಭಾಂಗಣದಲ್ಲಿ ಅಡುಗೆ ತ್ಯಾಜ್ಯ ಆಧಾರಿತ  ಜೈವಿಕ  ಇಂಧನ ಘಟಕ ಕುರಿತು ಉಪನ್ಯಾಸ ಕಾರ್ಯಕ್ರಮ ಜರುಗಿತು.

ಉಪನ್ಯಾಸವನ್ನು ಎಸ್.ಶ್ಯಾಂಸುಂದರ್ ನಡೆಸಿಕೊಟ್ಟರು. ನಮಗೆ ಪ್ರಕೃತಿಯಲ್ಲಿ ಸಿಗುವ ಶಕ್ತಿಯನ್ನು ಯಾವ ರೀತಿ ಬಳಸಿಕೊಳ್ಳಬೇಕು ಎಂಬುದನ್ನು ತಿಳಿಸಿದರು. ಪ್ರಕೃತಿಯಲ್ಲಿ ಸಿಗುವ ಸೋಲಾರ್ ನಿಂದ ಸೋಲಾರ್ ಕುಕ್ಕರ್, ಸೋಲಾರ್ ಲೈಟ್ ಗಳನ್ನು ಬಳಸಿ ಉಪಯೋಗವನ್ನು ಪಡೆಯಬಹುದು. ಕಸದಿಂದ ರಸ ಎಂಬಂತೆ ತ್ಯಾಜ್ಯ ವಸ್ತುಗಳನ್ನು ಬಳಸಿ ಯಾವ ರೀತಿ ಬಯೋಗ್ಯಾಸ್ ಗಳನ್ನು ತಯಾರಿಸಿಕೊಳ್ಳಬಹುದು ಎಂಬುದನ್ನು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿಕೊಟ್ಟರು.

ಉಪನ್ಯಾಸದ ಪ್ರಯೋಜನವನ್ನು ಹಲವರು ಪಡೆದುಕೊಂಡರು. (ಕೆ.ಎಸ್.-ಎಸಸ್.ಎಚ್)

Leave a Reply

comments

Related Articles

error: