ಮೈಸೂರು

ಯುವಜನತೆ ಸಾಹಿತ್ಯದಲ್ಲಿ ಅಭಿರುಚಿ ಬೆಳೆಸಿಕೊಳ್ಳಬೇಕು : ವಿದ್ವಾಂಸ ಸಣ್ಣಯ್ಯ

ಯುವಜನತೆ  ಅಂತರ್ಜಾಲದ ಕುರಿತು ಗಮನ ಹರಿಸುವುದು ಬಿಟ್ಟು  ಸಾಹಿತ್ಯದ ಕುರಿತು ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ವಿದ್ಯಾಂಸ ಸಣ್ಣಯ್ಯ ತಿಳಿಸಿದರು.

ಮೈಸೂರಿನ ಕಲಾಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ, ಮಹಿಳಾವೇದಿಕೆ, ದೇಸೀ ರಂಗದ ಆಶ್ರಯದಲ್ಲಿ ಏರ್ಪಡಿಸಲಾದ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು. ಯಾವುದೇ ಕೆಲಸವನ್ನು ಮಾಡಬೇಕಾದರೂ ಪ್ರಾಮಾಣಿಕವಾಗಿ, ತಲ್ಲೀನರಾಗಿ  ಆಸಕ್ತಿಯಿಂದ ಮಾಡಬೇಕು. ಯಾವುದಾದರೂ ಕೆಲಸವನ್ನು ಇಷ್ಟರೊಳಗೆ ಮುಗಿಸಬೇಕು ಅಂದುಕೊಂಡಿದ್ದರೆ, ನಿರ್ದಿಷ್ಟ ಗುರಿ ಇಟ್ಟು ಕೆಲಸ ಮಾಡಿದರೆ ಮಾತ್ರ ಸಾಧನೆ ಸಾಧ್ಯ  ಎಂದರು.

ಕನ್ನಡ ಸಾಹಿತ್ಯ ಅತ್ಯಂತ ಶ್ರೀಮಂತವಾದದದ್ದು. ಪ್ರಾಚೀನ ಸಾಹಿತ್ಯವನ್ನು ಹೆಚ್ಚು ಪ್ರಚಾರ ಮಾಡುವುದಕ್ಕೋಸ್ಕರ  ಈ ಕಾರ್ಯವನ್ನು ಮಾಡುತ್ತಿದ್ದೇನೆ.  ನನ್ನ   ಈ ಕಾರ್ಯ ಇತರರಿಗೆ ಪ್ರೇರಣೆಯಾಗಲಿದೆ ಎಂದು ಭಾವಿಸಿದ್ದೇನೆ. ಕನ್ನಡ  ಉಳಿಸಿ ಬೆಳೆಸುವ ಕೆಲಸವಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚೆನ್ನಪ್ಪ, ಸಾಹಿತಿ ಕೃಷ್ಣಮೂರ್ತಿ, ಡಾ.ಎ.ಆರ್. ಮದನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. (ಬಿ.ಎಂ.-ಎಸ್.ಎಚ್)

Leave a Reply

comments

Related Articles

error: