ಮೈಸೂರು

ಶ್ರೀ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮಿಗಳ ಒಂದನೇ ವರ್ಷದ ಪುಣ್ಯಸ್ಮರಣೆ : ವೃದ್ಧಾಶ್ರಮದಲ್ಲಿ ವೃದ್ಧರಿಗೆ ಹಣ್ಣು ಹಂಪಲು ವಿತರಣೆ

ಮೈಸೂರು,ಜ.21:- ಪ್ರಜ್ಞಾವಂತ ನಾಗರಿಕ ವೇದಿಕೆ ವತಿಯಿಂದ ಶ್ರೀ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮಿಗಳ ಒಂದನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ನಿನ್ನೆ ಕನಕಗಿರಿಯಲ್ಲಿರುವ ಭಾರತಿ ವೃದ್ಧಾಶ್ರಮದಲ್ಲಿ ವೃದ್ಧರಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಮೊದಲನೇ ವರ್ಷದ ಸ್ಮರಣೆ ಕಾರ್ಯಕ್ರಮವನ್ನು  ಆಚರಿಸಲಾಯಿತು.

ಹಣ್ಣು ಹಂಪಲು ವಿತರಿಸಿ ಮಾತನಾಡಿದ ನಗರಪಾಲಿಕೆ ಸದಸ್ಯ  ಮಾವಿ ರಾಮಪ್ರಸಾದ್ ಜನವರಿ 21 ರಂದು  ನಡೆದಾಡುವ ದೇವರು,ತ್ರಿವಿಧ ದಾಸೋಹಿ,ಡಾ. ಶ್ರೀ ಶಿವಕುಮಾರ ಮಹಾ ಸ್ವಾಮಿಗಳವರ 1 ನೇ ವರ್ಷದ ಪುಣ್ಯಸ್ಮರಣೆಯಂದು ದಾಸೋಹಿ ದಿನಾಚಾರಣೆ ಮಾಡಬೇಕೆಂದು ಹಾಗೂ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ರಾಜ್ಯ ಸರ್ಕಾರಕ್ಕೂ ಹಾಗೂ ಕೇಂದ್ರ ಸರ್ಕಾರಕ್ಕೂ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಭಕ್ತವೃಂದದಿಂದ ಹಾಗೂ ನಮ್ಮ ಪ್ರಜ್ಞಾವಂತ ನಾಗರಿಕ ವೇದಿಕೆಯ ವತಿಯಿಂದ  ಮನವಿ ಮಾಡಿಕೊಳ್ಳುತ್ತೇವೆ   ಜನವರಿ 21 ರಂದು ದಾಸೋಹ ದಿನ ಎಂದು ಘೋಷಿಸಲಿ ಹಾಗೆಯೇ ಶ್ರೀಗಳಿಗೆ ಭಾರತ ರತ್ನ ನೀಡಲಿ ಎಂದು ಒತ್ತಾಯಿಸಿದರು.

ಜನವರಿ 21 ರಂದು ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯವಾಗಿ ಒಂದು ವರ್ಷ ಆಗುತ್ತದೆ. ಈ ಹಿನ್ನೆಲೆಯಲ್ಲಿ ಜನವರಿ 21 ರಂದು ಶಿವಕುಮಾರ ಸ್ವಾಮೀಜಿ ಸ್ಮರಣೆಗಾಗಿ ದಾಸೋಹ ದಿನ ಎಂದು ಘೋಷಿಸಬೇಕು. ಇಡೀ ರಾಜ್ಯದಲ್ಲೇ ಪ್ರಪ್ರಥಮವಾಗಿ ಲಕ್ಷಾಂತರ ಜನರಿಗೆ ದಾಸೋಹ ಮಾಡುವ ಸೇವೆ ಮೊಟ್ಟ ಮೊದಲಿಗೆ ಶ್ರೀ ಮಠದಲ್ಲಿ ಕಂಡು ಬಂದಿದ್ದು ಬರಗಾಲದಲ್ಲಿಯೂ ಮಠದಲ್ಲಿ ಅನ್ನದಾಸೋಹ ನಡೆಸಿಕೊಂಡು ಬಂದು ಹಸಿದವರಿಗೆ ಅನ್ನ ನೀಡಿದ ಕೀರ್ತಿ ಪೂಜ್ಯರಿಗೆ ಸಲ್ಲುತ್ತದೆ. ಅವರ ಲಿಂಗೈಕ್ಯವಾದ ದಿನವೂ  ಸಹ ಬಂದಂತಹ ಭಕ್ತರಿಗೆ ದಾಸೋಹ ನೀಡಿದ್ದಾರೆ .ಬಂದ ಭಕ್ತಾದಿಗಳು ಯಾರೂ ಸಹ ಪ್ರಸಾದ ಸೇವಿಸದೆ ಮಠದಿಂದ ಹೋಗಬಾರದು ಎನ್ನುವುದು ಶಿವಕುಮಾರ ಸ್ವಾಮೀಜಿಯವರ ಕೊನೆಯ ಆಸೆಯಾಗಿತ್ತು ಅದರಂತೆಯೇ ನಡೆದುಕೊಳ್ಳಲಾಯಿತು. ಆದ್ದರಿಂದ ಜನವರಿ 21 ರಂದು  ಮಂಗಳವಾರವನ್ನು ದಾಸೋಹ ದಿನವೆಂದು ಪರಿಗಣಿಸಿ ಮನೆ ಮನೆಯಲ್ಲಿ ಒಬ್ಬರಿಗಾದರೂ ದಾಸೋಹ ಮಾಡುವ ಸಂಕಲ್ಪವನ್ನು ಮಾಡಬೇಕು. ಅದರ ಮೂಲಕ ಪೂಜ್ಯರಿಗೆ ಗೌರವ ಸಲ್ಲಿಸಬೇಕು ಎಂದು ಹೇಳಿದರು.

ಬಿಜೆಪಿ ಯುವ ಮುಖಂಡ ಹಾಗೂ ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷರಾದ ಕಡಕೊಳ ಜಗದೀಶ್  ಮಾತನಾಡಿ ಶ್ರೀಗಳಿಗೆ ಭಾರತ ರತ್ನ ನೀಡಲು ಒತ್ತಾಯಿಸಿದರು. ತುಮಕೂರು ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು , ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳು ಮಾಡಿದ ಕಾರ್ಯ ದೇಶಕ್ಕೆ ಮಾದರಿಯಾಗಿದೆ ಭಾರತ ರತ್ನ ನೀಡಿ ಗೌರವಿಸಿದರೆ ಪ್ರಶಸ್ತಿಗೆ ಗೌರವ ನೀಡಿದಂತಾಗುತ್ತದೆ ಎಂದರು.

ಈ ಸಂದರ್ಭ  ಕೆಆರ್ ಬ್ಯಾಂಕ್ ಉಪಾಧ್ಯಕ್ಷರಾದ ಬಸಪ್ಪ,ರವಿ ತೇಜಾ, ಸುಚೇಂದ್ರ, ನವೀನ್, ರಘು,ಸುಮಾ, ಗಣೇಶ್ ಪ್ರಸಾದ್,ದುರ್ಗಾಪ್ರಸಾದ್ , ಸಂತೋಷ್  ಲಕ್ಷ್ಮೀದೇವಿ,ಮಹದೇವ ಪ್ರಸಾದ್  ಮತ್ತಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: