ಮೈಸೂರು

ಎನ್ ಆರ್ ಸಿ ಹಾಗೂ ಸಿಎಎ ವಿರೋಧಿಸಿ ಮೈಸೂರಿನಲ್ಲಿ ಪ್ರತಿಭಟನೆ

ಮೈಸೂರು,ಜ.21:- ತಿಂಗಳಾದರೂ  ಪೌರತ್ವ ಕಾಯ್ದೆ ಕಿಚ್ಚು ಆರಿಲ್ಲ. ಎನ್ ಆರ್ ಸಿ ಹಾಗೂ ಸಿಎಎ ವಿರೋಧಿಸಿ ಮೈಸೂರಿನಲ್ಲಿ ಪ್ರತಿಭಟನೆ ಮುಂದುವರೆದಿದೆ.

ಎಸ್ ಡಿಪಿಐ ಹಾಗೂ ದಲಿತ ಪರ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿದ್ದು, ನಗರದ ಮಿಲಾದ್ ಬಾಗ್ ಪಾರ್ಕ್  ಹಾಗೂ ಟೌನ್ ಹಾಲ್ ಮುಂಭಾಗ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆ ಎರಡು ದಿನಗಳ ಕಾಲ ನಡೆಯಲಿದ್ದು, ಪ್ರತಿಭಟನೆ ಹಿನ್ನಲೆಯಲ್ಲಿ ಮಿಲಾದ್ ಪಾರ್ಕ್ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್‌ ಏರ್ಪಡಿಸಲಾಗಿದೆ.

ಪ್ರತಿಭಟನಾಕಾರರು ಸಂವಿಧಾನ ಜಿಂದಾಬಾದ್ ಎಂದು ಘೋಷಣೆ ಕೂಗಿದರು. ಹಮ್  ಕೋ ಜಾನ್ ಸೆ ಪ್ಯಾರಾ ಹೇ, ಯೆ ಹಿಂದೂಸ್ಥಾನ್ ಹಮಾರಾ ಹೇ ಎಂಬ ಹಾಡನ್ನು ಹಾಡಿದರು.

ಪ್ರತಿಭಟನೆಯಲ್ಲಿ ಎಸ್ ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್,ಪ್ರೊ. ಮಹೇಶ ಚಂದ್ರ ಗುರು,ಸೇರಿದಂತೆ ಪ್ರಗತಿಪರರು ಭಾಗಿಯಾಗಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: