ಪ್ರಮುಖ ಸುದ್ದಿಮನರಂಜನೆ

ಮೂರೂ ಸೇನಾ ಮುಖ್ಯಸ್ಥರೊಂದಿಗೆ ‘ತಾನಾಜಿ’  ವೀಕ್ಷಿದ ಬಾಲಿವುಡ್ ಸಿಂಗಮ್ ಅಜಯ್ ದೇವಗನ್ :  ಅವರೊಂದಿಗೆ ಸಮಯ ಕಳೆದಿದ್ದೇ ಗೌರವ

ದೇಶ(ನವದೆಹಲಿ)ಜ.21:- ಬಾಲಿವುಡ್ ಸಿಂಗಮ್ ಅಜಯ್ ದೇವಗನ್, ನಟ  ಸೈಫ್ ಅಲಿ ಖಾನ್ ಮತ್ತು ನಟಿ ಕಾಜೋಲ್ ಅಭಿನಯದ  ‘ತಾನಾಜಿ: ದಿ ಅನ್ಸಂಗ್ ವಾರಿಯರ್’ ಚಿತ್ರಮಂದಿರಗಳಲ್ಲಿ ಯಶಸ್ವೀ ಪ್ರದರ್ಶನ ಕಾಣುತ್ತಿದೆ.

ಭಾರತದ ಭೂಸೇನೆ, ವಾಯುಸೇನೆ, ನೌಕಾಸೇನೆಯ ಮೂವರು ಮುಖ್ಯಸ್ಥರೂ ಕೂಡ ಈ ಚಿತ್ರವನ್ನು ನೋಡಿ ಆನಂದಿಸಿದ್ದಾರೆ. ಭೂಸೇನೆಯ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಣೆ, ನೌಕಾಸೇನೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಮತ್ತು ವಾಯು ಸೇನೆಯ ಮುಖ್ಯಸ್ಥ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಈ ಚಿತ್ರವನ್ನು ದೆಹಲಿಯ ಚಿತ್ರಮಂದಿರಗಳಲ್ಲಿ ನೋಡಿದ್ದಾರೆ. ಅವರೊಂದಿಗೆ ನಟ ಅಜಯ್ ದೇವಗನ್ ಇರುವ ಚಿತ್ರವೊಂದು ವೈರಲ್ ಆಗಿದೆ.  ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಹರಿಂದರ್ ಸಿಂಗ್ ಸಿಕ್ಕಾ ತಮ್ಮ ಟ್ವೀಟರ್ ಖಾತೆಯಲ್ಲಿ  ಚಿತ್ರವನ್ನು ಹಂಚಿಕೊಂಡಿದ್ದಾರೆ. ಚಿತ್ರವನ್ನು ಹಂಚಿಕೊಂಡ ಅವರು, “ತಾನಾಜಿ” ಇತಿಹಾಸ ನಿರ್ಮಿಸಿದ್ದಾರೆ. ನೌಕಾಪಡೆಯ ಮುಖ್ಯಸ್ಥರು, ಸೇನಾ ಮುಖ್ಯಸ್ಥರು ಮತ್ತು ವಾಯು ಮುಖ್ಯಸ್ಥರೆಲ್ಲರೂ ಒಟ್ಟಾಗಿ ನಟ ಅಜಯ್ ದೇವ್‌ಗನ್ ಮತ್ತು ನಟಿ ಕಾಜೋಲ್ ಅವರ ಅದ್ಭುತ ಅಭಿನಯ, ಭಾರತದ ರಾಷ್ಟ್ರೀಯ ನಾಯಕನ  ಕುರಿತಾಗಿ ಮೂಡಿಬಂದ ಚಿತ್ರವನ್ನು ದೆಹಲಿಯಲ್ಲಿ ನೋಡಿದ್ದಾರೆ. ಡೋಂಟ್ ಮಿಸ್ ಇಟ್ ಫ್ರೆಂಡ್ಸ್, ಇಟ್ಸ್ ಔಟ್ ಆಫ್ ದಿಸ್ ವರ್ಲ್ಡ್’  ಎಂದು ಬರೆದುಕೊಂಡಿದ್ದಾರೆ.

ಈ ಟ್ವೀಟ್ ಅನ್ನು ರಿಟ್ವೀಟ್ ಮಾಡಿದ ನಟ ಅಜಯ್ ದೇವಗನ್, “ಮೂರೂ ಸೇನಾ ಮುಖ್ಯಸ್ಥರೊಂದಿಗೆ ಸಂಜೆ ಕಳೆದಿದ್ದಕ್ಕೆ ನನಗೆ ಗೌರವವಿದೆ. ತಾನಾಜಿಗೆ ಪ್ರೀತಿ ನೀಡಿದ ಎಲ್ಲರಿಗೂ ಧನ್ಯವಾದಗಳು” ಎಂದು ಬರೆದಿದ್ದಾರೆ.

ಅಜಯ್ ಅಭಿನಯದ ತಾನಾಜಿ ಭರ್ಜರಿ ಯಶಸ್ಸನ್ನು ಕಾಣುತ್ತಿದ್ದು,  ಚಿತ್ರ ಕೇವಲ 11 ದಿನಗಳಲ್ಲಿ 175 ಕೋಟಿಗೂ ಹೆಚ್ಚು ಗಳಿಕೆ ಕಂಡಿದೆ.   (ಏಜೆನ್ಸಿಸ್, ಎಸ್.ಎಚ್)

Leave a Reply

comments

Related Articles

error: