ಮೈಸೂರು

ಅಪರಿಚಿತ ವ್ಯಕ್ತಿಯ ಶವ ಪತ್ತೆ : ವಾರೀಸುದಾರರಿದ್ದಲ್ಲಿ ಸಂಪರ್ಕಿಸಲು ಮನವಿ

ಮೈಸೂರಿನ ಅಶೋಕಪುರಂ ರೈಲು ನಿಲ್ದಾಣದ ಫ್ಲ್ಯಾಟ್ ಫಾರಂ ನಂಬರ್ ಒಂದರಲ್ಲಿ ಅಸ್ವಸ್ಥರಾಗಿ ಬಿದ್ದಿದ್ದ ವ್ಯಕ್ತಿಯನ್ನು,108 ತುರ್ತು ಚಿಕಿತ್ಸಾ ವಾಹನದಲ್ಲಿ ಕರೆದುಕೊಂಡು ಹೋಗಿ ಮಾರ್ಚ್ 3 ರಂದು ರಾತ್ರಿ 8-10 ಕ್ಕೆ ಕೆ.ಆರ್. ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ಕೊಡಿಸಲೆಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಾ.7ರಂದು ಮೃತಪಟ್ಟಿರುತ್ತಾರೆ.

ಮೈಸೂರು ರೈಲ್ವೆ ಪೊಲೀಸ್ ಠಾಣೆಯವರು ಅಸಹಜ ಮರಣ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು, ವಾರಸುದಾರರು ಪತ್ತೆಯಾಗಿಲ್ಲ. ಮೃತ ವ್ಯಕ್ತಿಯ ಎತ್ತರ-5.6 ಅಡಿ, ಸಾಧಾರಣ ಕಪ್ಪು ಮೈಬಣ್ಣ, ಕೃಶವಾದ ಶರೀರ, ಕೋಲುಮುಖ, ತಲೆಯಲ್ಲಿ ಸುಮಾರು 4 ಇಂಚು ಉದ್ದದ ಕಪ್ಪು ಕೂದಲು ಇರುತ್ತದೆ. ಉದ್ದನೆಯ ಮೂಗು, ಮೈಮೇಲೆ ಯಾವುದೇ ಬಟ್ಟೆಗಳು ಇರುವುದಿಲ್ಲ. ಬಿಳಿಯ ಉಡುದಾರ ಇರುತ್ತದೆ.
ಮೃತ ದೇಹವನ್ನು ಮೈಸೂರಿನ ಮೆಡಿಕಲ್ ಕಾಲೇಜಿನ ಶವಗಾರದಲ್ಲಿಡಲಾಗಿದೆ. ಈ ಮೃತ ವ್ಯಕ್ತಿಯ ವಾರಸುದಾರರ ಬಗ್ಗೆ ಮಾಹಿತಿ ಇರುವವರು ಮೈಸೂರು ರೈಲ್ವೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 0821-2516579 ಯನ್ನು ಸಂಪರ್ಕಿಸುವಂತೆ ಕೋರಿದೆ. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: