ದೇಶಪ್ರಮುಖ ಸುದ್ದಿ

ನೇಪಾಳ: ಪ್ರವಾಸಕ್ಕೆ ತೆರಳಿದ್ದ ಒಂದೇ ಕುಟುಂಬದ 8 ಮಂದಿ ಭಾರತೀಯರ ಸಾವು

ಕಠ್ಮಂಡು,ಜ.21-ಪ್ರವಾಸಕ್ಕಾಗಿ ನೇಪಾಳಕ್ಕೆ ತೆರಳಿದ್ದ 8 ಮಂದಿ ಭಾರತೀಯರು ಇಲ್ಲಿನ ಹೋಟೆಲ್ ನ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ನೇಪಾಳದ ಡಮನ್ ನ ಮಕವಾನ್‌ಪುರ ಜಿಲ್ಲೆಯ ಎವರೆಸ್ಟ್ ಪನೋರಮಾ ರೆಸಾರ್ಟ್ ನ ಕೊಠಡಿಯಲ್ಲಿ ಒಂದೇ ಕುಟುಂಬದ 8 ಮಂದಿಯ ಪ್ರವಾಸಿಗರ ಶವ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೃತರೆಲ್ಲರೂ ಕೇರಳದವರೆಂದು ತಿಳಿದುಬಂದಿದ್ದು, ದಂಪತಿ ಮತ್ತು 4 ಮಕ್ಕಳು ಹಾಗೂ ಇಬ್ಬರು ಸಂಬಂಧಿಕರು ಕೊಠಡಿಯಲ್ಲಿ ತಂಗಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇನ್ನು ಮೇಲ್ನೋಟಕ್ಕೆ ಪ್ರವಾಸಿಗರಲ್ಲೆರೂ ಉಸಿರುಗಟ್ಟೆ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಅಧಿಕಾರಿಗಳು ನೀಡಿರುವ ಮಾಹಿತಿ ಮೇರೆಗೆ ಡಮನ್ ನಲ್ಲಿ ಮೈನಸ್ ಡಿಗ್ರಿ ಚಳಿ ಇದ್ದು, ಚಳಿಯಿಂದ ತಪ್ಪಿಸಿಕೊಳ್ಳಲು ಇವರು ತಂಗಿದ್ದ ಕೊಠಡಿಗೆ ಗ್ಯಾಸ್ ಹೀಟರ್ ನ ಸೇವೆ ಒದಗಿಸಲಾಗಿತ್ತು. ಈ ಹೀಟರ್ ನಿಂದ ಹೊರ ಬಂದ ಗ್ಯಾಸ್ ನಿಂದಲೇ ಪ್ರವಾಸಿಗರಲ್ಲೆರೂ ಉಸಿರುಗಟ್ಟಿ ಸಾವನ್ನಪ್ಪಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. (ಎಂ.ಎನ್)

Leave a Reply

comments

Related Articles

error: