ಮೈಸೂರು

ಕಡಕೊಳ ಗ್ರಾಮದಲ್ಲಿ ಕಲುಷಿತ ನೀರು ಕುಡಿದು 119 ಮಂದಿ ಅಸ್ವಸ್ಥ : ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಶಾಸಕ ಜಿ.ಟಿ.ದೇವೇಗೌಡ

ಮೈಸೂರು,ಜ.21:- ಮೈಸೂರಿನ ಕಡಕೊಳ ಗ್ರಾಮದಲ್ಲಿ ಕಲುಷಿತ ನೀರು ಕುಡಿದು 119 ಮಂದಿ ಅಸ್ವಸ್ಥ ಗೊಂಡಿದ್ದು, ಮಾಹಿತಿ ಬಂದ ಬೆನ್ನಲ್ಲೇ ಇಂದು   ಕಡಕೊಳ ಹಾಗೂ ಕೆಆರ್ ಆಸ್ಪತ್ರೆ  ಶಾಸಕ  ಜಿ.ಟಿ.ದೇವೇಗೌಡ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಅಸ್ವಸ್ಥಗೊಂಡು  ಮೈಸೂರಿನ ಕಡಕೊಳ ಆಸ್ಪತ್ರೆಗೆ ದಾಖಲಾದವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಅಸ್ವಸ್ಥ ಗೊಂಡವರಿಗೆ ಧೈರ್ಯ ತುಂಬಿದರು. ವೈದ್ಯರಿಂದ ಮಾಹಿತಿ ಪಡೆದು ಸೂಕ್ತ ಚಿಕಿತ್ಸೆ ನೀಡುವಂತೆ ಮನವಿ ಮಾಡಿದರು..

ಕಡಕೊಳ ಗ್ರಾಮಕ್ಕೆ ಭೇಟಿ ನೀಡಿ ಸ್ಥಳೀಯ ಜನರಿಂದ ಮಾಹಿತಿ ಸಂಗ್ರಹಿಸಿದರು. ಆರೋಗ್ಯಇಲಾಖೆ ಅಧಿಕಾರಿಗಳಿಂದ ಸ್ಥಳೀಯ ಜನರ ಆರೋಗ್ಯ ಪರಿಶೀಲಿಸುವಂತೆ ಸೂಚನೆ ನೀಡಿದರು. ಕುಡಿಯುವ ನೀರು ಸರಬರಾಜು ಮಾಡಲು ಪಂಚಾಯತ್ ವತಿಯಿಂದ ಟ್ಯಾಂಕರ್ ನಲ್ಲಿ ನೀರು ಸರಬರಾಜು ಮಾಡಲು  ಸೂಚನೆ ನೀಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: