ಮೈಸೂರು

ವರದಕ್ಷಿಣೆ ಕಿರುಕುಳ : ಅತ್ತೆ ವಿಷಸೇವಿಸಿ ಆತ್ಮಹತ್ಯೆ

ಮಗಳಿಗೆ ವರದಕ್ಷಿಣೆ ಕಿರುಕುಳ ಕೊಡುವಂತೆ ಪೀಡಿಸುತ್ತಿದ್ದ ಅಳಿಯ ಪತ್ನಿಯ ತವರು ಮನೆಯವರ ಮೇಲೆ ಠಾಣೆಯಲ್ಲಿ ದೂರುದಾಖಲಿಸಿದ್ದಲ್ಲದೇ, ಕಿರುಕುಳ ನೀಡಿದ್ದನ್ನು ಸಹಿಸದ ತಾಯಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೃತರನ್ನು ಬಸವೇಶ್ವರ ರಸ್ತೆ ನಿವಾಸಿ ರಾಜೇಶ್ವರಿ(50) ಎಂದು ಗುರುತಿಸಲಾಗಿದೆ. ರಾಜೇಶ್ವರಿ ಅವರ  ಮಗಳು ಸೌಮ್ಯಶ್ರೀಯನ್ನು ಶ್ರೀರಂಗಪಟ್ಟಣ ಅಲಗೂಡು ಗ್ರಾಮದ ರವಿಕುಮಾರ್ ಗೆ  ಎರಡು ವರ್ಷದ ಹಿಂದೆ ಕೊಟ್ಟು ಮದುವೆ ಮಾಡಲಾಗಿತ್ತು. ನಾಲ್ಕು ತಿಂಗಳ ಕಾಲ ಅನ್ಯೋನ್ಯ ಜೀವನ ಸಾಗಿಸಿದ ನಂತರ ವರದಕ್ಷಿಣೆಗಾಗಿ ರವಿಕುಮಾರ್ ಕಿರುಕುಳ ನೀಡಿ ಪತ್ನಿ ಸೌಮ್ಯಶ್ರೀ ಯನ್ನು ತವರು ಮನೆಗೆ ಕಳುಹಿಸಿದ್ದ ಎನ್ನಲಾಗಿದೆ.  ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ನಂತರ ಸೌಮ್ಯಶ್ರೀ ಮತ್ತೆ ಪತಿ ಮನೆ ಸೇರಿದ್ದಳು ಎನ್ನಲಾಗಿದೆ.

ಆದರೆ ರವಿಕುಮಾರ್ ಪದೇ ಪದೇ ವರದಕ್ಷಿಣೆ ಕಿರುಕುಳ ನೀಡುತ್ತಿದ್ದು, ಸೌಮ್ಯಶ್ರೀ ತಾಯಿ ರಾಜೇಶ್ವರಿ ಅಳಿಯನಿಗೆ ಮೊಬೈಲ್ ನಲ್ಲಿ ಬುದ್ದಿವಾದ ಹೇಳಿದ್ದರು ಎಂದು ತಿಳಿದುಬಂದಿದೆ. ಇದನ್ನು ರೆಕಾರ್ಡ್ ಮಾಡಿಕೊಂಡ ರವಿಕುಮಾರ್ ತನಗೆ ಪತ್ನಿ ತವರು ಮನೆಯಿಂದ ಬೆದರಿಕೆ ಹಾಕಿದ್ದಾಗಿ ಅರಕೆರೆ ಠಾಣೆಗೆ ದೂರು ದಾಖಲಿಸಿದ್ದಲ್ಲದೆ ರಾಜೇಶ್ವರಿಗೆ ಮಾನಸಿಕವಾಗಿ ಕಿರುಕುಳ ಕೊಟ್ಟಿದ್ದಾನೆ ಎನ್ನಲಾಗಿದೆ. ಇದರಿಂದ ಮನನೊಂದ ರಾಜೇಶ್ವರಿ ಗುರುವಾರ ರಾತ್ರಿ ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: