ಪ್ರಮುಖ ಸುದ್ದಿ

ಜೀವಹಾನಿಯಾದ 20 ಪ್ರಕರಣ : ತಲಾ ರೂ.2 ಲಕ್ಷ ಅನುಕಂಪ ಭತ್ಯೆ ಬಿಡುಗಡೆ

ರಾಜ್ಯ(ಮಡಿಕೇರಿ) ಜ.23 :- ಪ್ರಧಾನಮಂತ್ರಿ ಅವರ ರಾಷ್ಟ್ರೀಯ ಪರಿಹಾರ ನಿಧಿಯಿಂದ 2019-20ನೇ ಸಾಲಿನಲ್ಲಿ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಜೀವಹಾನಿಯಾದ 20 ಪ್ರಕರಣಗಳಿಗೆ ತಲಾ ರೂ.2 ಲಕ್ಷದಂತೆ ಅನುಕಂಪ ಭತ್ಯೆಯನ್ನು ರಾಜ್ಯ ಸರ್ಕಾರಕ್ಕೆ ಬಿಡುಗಡೆ ಮಾಡಿರುವಂತೆ, ಆದೇಶದಲ್ಲಿ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಜೀವಹಾನಿಯಾದ 20 ಪ್ರಕರಣಗಳಿಗೆ ತಲಾ ರೂ.2 ಲಕ್ಷದಂತೆ ರೂ.40 ಲಕ್ಷ ಮೊತ್ತವನ್ನು ಬಿಡುಗಡೆ ಮಾಡಲಾಗಿರುತ್ತದೆ.

ಅದರಂತೆ ಮೃತಪಟ್ಟ 20 ಪ್ರಕರಣಗಳಲ್ಲಿ 17 ಜನ ಮೃತರ ವಾರಸುದಾರರ ಬ್ಯಾಂಕ್ ಖಾತೆಗೆ ನೆಪ್ಟ್ ಮೂಲಕ ವರ್ಗಾವಣೆ ಮಾಡಲಾಗಿದೆ. ಬಾಕಿ ಉಳಿದ ಮೂವರು ಮೃತರ ವಾರಸುದಾರರನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.   (ಕೆಸಿಐ,ಎಸ್.ಎಚ್)

Leave a Reply

comments

Related Articles

error: