ಪ್ರಮುಖ ಸುದ್ದಿ

ಮಡಿಕೇರಿ ಸಾರ್ವಜನಿಕ ಗ್ರಂಥಾಲಯದಲ್ಲಿ 79,500 ಕ್ಕೂ ಹೆಚ್ಚು  ಪುಸ್ತಕ !

ರಾಜ್ಯ(ಮಡಿಕೇರಿ) ಜ.23 :- ಜಿಲ್ಲೆಯ 104 ಗ್ರಾಮ ಪಂಚಾಯತ್ ಪೈಕಿ 98 ಗ್ರಾ.ಪಂ.ಗಳಲ್ಲಿ ಸಾರ್ವಜನಿಕ ಗ್ರಂಥಾಲಯಗಳು ಕಾರ್ಯ ನಿರ್ವಹಣೆ ಮಾಡುತ್ತಿವೆ. ಹಾಗೆಯೇ ಜಿಲ್ಲಾ ಕೇಂದ್ರ ಗ್ರಂಥಾಲಯ, ನಗರದ ಮಹದೇವಪೇಟೆ, ಸೋಮವಾರಪೇಟೆ, ವಿರಾಜಪೇಟೆ ಮತ್ತು ಕುಶಾಲನಗರದಲ್ಲಿ ಶಾಖಾ ಗ್ರಂಥಾಲಯಗಳು ಕಾರ್ಯನಿರ್ವಹಿಸುತ್ತಿವೆ ಎಂದು ಜಿಲ್ಲಾ ಗ್ರಂಥಾಲಯ ಅಧಿಕಾರಿ ಲೀಲಾವತಿ ಅವರು ಮಾಹಿತಿ ನೀಡಿದ್ದಾರೆ.

ಮಡಿಕೇರಿ ಸಾರ್ವಜನಿಕ ಗ್ರಂಥಾಲಯದಲ್ಲಿ 79,500 ಕ್ಕೂ ಹೆಚ್ಚು  ಪುಸ್ತಕಗಳಿದ್ದು, ಪ್ರತಿದಿನ ಸರಿ ಸುಮಾರು 60 ರಿಂದ 70 ಜನ ಗ್ರಂಥಾಲಯ ಸೌಲಭ್ಯ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಈ ಹಿಂದೆ 100 ಕ್ಕಿಂತ ಹೆಚ್ಚು ಜನರು ಗ್ರಂಥಾಲಯದ ಸೌಲಭ್ಯ ಪಡೆಯುತ್ತಿದ್ದರು ಎಂದು ಜಿಲ್ಲಾ ಸಾರ್ವಜನಿಕ ಗ್ರಂಥಾಲಯ ಅಧಿಕಾರಿ ಲೀಲಾವತಿ ಆವರು ತಿಳಿಸಿದ್ದಾರೆ.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: