ಮೈಸೂರು

ಮೂತ್ರಪಿಂಡ ತಪಾಸಣಾ ಪ್ಯಾಕೇಜ್ ಬಿಡುಗಡೆಗೊಳಿಸಿದ ವಿ.ಶ್ರೀನಿವಾಸ್ ಪ್ರಸಾದ್

ವಿಶ್ವ ಮೂತ್ರಪಿಂಡ ದಿನದ ಅಂಗವಾಗಿ ಮೈಸೂರಿನ ಜೆಎಸ್ ಎಸ್ ಆಸ್ಪತ್ರೆಯ ಆವರಣದಲ್ಲಿ ಶುಕ್ರವಾರ ಮೂತ್ರಪಿಂಡ ತಪಾಸಣಾ ಪ್ಯಾಕೇಜ್ ನ್ನು ಬಿಡುಗಡೆಗೊಳಿಸಲಾಯಿತು.

ಬಿಜೆಪಿ ಮುಖಂಡ ವಿ.ಶ್ರೀನಿವಾಸ್ ಪ್ರಸಾದ್ ಮೂತ್ರಪಿಂಡ ತಪಾಸಣಾ ಪ್ಯಾಕೇಜ್ ನ್ನು ಬಿಡುಗಡೆಗೊಳಿಸಿದರು.  ಬಳಿಕ ಮಾತನಾಡಿದ ಅವರು ವಿಶ್ವ ಕಿಡ್ನಿ ದಿನಾಚರಣೆಯ ಸಂದರ್ಭ ಉತ್ತಮ ಪ್ಯಾಕೇಜ್ ಬಿಡುಗಡೆಗೊಳಿಸುತ್ತಿರುವುದು ಸಂತಸದ ವಿಷಯ ಎಂದರು.
ಮೂತ್ರಪಿಂಡ, ಹೃದಯವನ್ನು ಬಹಳ ಕಾಳಜಿಯಿಂದ ನೋಡಿಕೊಳ್ಳಬೇಕು. ನನಗೂ ಕೂಡ ಮೂತ್ರಪಿಂಡವನ್ನು 2013ರಲ್ಲಿ ವರ್ಗಾಯಿಸಲಾಗಿದೆ. ನಿನ್ನೆಯೂ ಬೆಂಗಳೂರಿನಲ್ಲಿ ಚೆಕ್ ಅಪ್ ಮಾಡಿಸಿದ್ದೇನೆ. ಯಾವುದೇ ತೊಂದರೆ ಇಲ್ಲ. ನಾನೂ ಒಳ್ಳೆ ಕ್ರೀಡಾ‌ಪಟುವಾಗಿದ್ದೆ. ಒಮ್ಮೆ ಡೆಂಗ್ಯೂ ಜ್ವರ ಬಂತು ಆವೇಳೆ ತಪಾಸಣೆ ಮಾಡಿಸಿದಾಗ ಮಧುಮೇಹವಿರುವುದು ತಿಳಿದುಬಂತು ಎಂದರು. ಅದಾದ ಬಳಿಕ ನಾನು ಆರೋಗ್ಯದ ಕುರಿತು ತಿಳಿದುಕೊಳ್ಳಲು ಮುಂದಾಗುದ್ದಲ್ಲದೇ, ಕಾಳಜಿ ವಹಿಸಿದೆ ಎಂದರು.  ಡಯಾಲಿಸಿಸ್ ಹಾಗೂ ಮೂತ್ರಪಿಂಡ ವರ್ಗಾಯಿಸುವ ಕುರಿತಂತೆ ಸಲಹೆ ನೀಡಿದರು. ನನಗೆ ಚಿಕಿತ್ಸೆ ನೀಡಿದ ನಂತರ ಕೇವಲ ನಾಲ್ಕು ತಿಂಗಳ ಅಂತರದಲ್ಲಿ ಚುನಾವಣೆ ಇತ್ತು. ನಾನು ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಿದ ಪರಿಣಾಮ  ಇವತ್ತು ಚೆನ್ನಾಗಿದ್ದೇನೆ ಎಂದರು. ಕೂಡ ರೋಗಿಗಳು ಹೆದರಬೇಡಿ, ಕಡಿಮೆ ಹಣದಲ್ಲಿ ನಿಮಗೆ ಆರೋಗ್ಯ ಒದಗಿಸುತ್ತಿದ್ದಾರೆ. ರೋಗಿಗಳು ಧೈರ್ಯದಿಂದ ಸಮಸ್ಯೆಗಳನ್ನು ಎದುರಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜೆ.ಎಸ್.ಎಸ್ ಮಹಾವಿದ್ಯಾಪೀಠದ ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಮಹೇಶ್.ಆರ್, ನಿರ್ದೇಶಕ ಡಾ.ಎಂ.ಡಿ.ರವಿ, ಪ್ರಾಂಶುಪಾಲ ಡಾ.ಬಸವನಗೌಡಪ್ಪ, ವೈದ್ಯಕೀಯ ಅಧೀಕ್ಷಕ ಡಾ.ಎಂ.ಗುರುಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: