ಮೈಸೂರು

ಜಿಲ್ಲಾಡಳಿತದಿಂದ ಮೈಸೂರು ಅರಮನೆಯಲ್ಲಿ ಮಾವುತರಿಗೆ ಉಪಹಾರ

ಅಂಬಾ ವಿಲಾಸ ಅರಮನೆಯಲ್ಲಿ ಮಂಗಳವಾರ ಮಾವುತರು ಮತ್ತು ಅವರ ಕುಟುಂಬದವರಿಗೆ ಜಿಲ್ಲಾಡಳಿತವು ಉಪಹಾರ ಆಯೋಜಿಸಿತ್ತು. ಮಾವುತರ ಬೇಡಿಕೆಗಳನ್ನು ಅರಿಯಲು ಸಚಿವರು ಮತ್ತು ಜಿಲ್ಲಾಡಳಿತದೊಂದಿಗೆ ಪ್ರತಿ ವರ್ಷ ಉಪಹಾರ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ.

ಉಸ್ತುವಾರಿ ಸಚಿವ ಡಾ.ಎಚ್‍.ಸಿ. ಮಹದೇವಪ್ಪ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಉಪಾಹಾರ ಕಾರ್ಯಕ್ರಮವನ್ನು ಸಾಂಪ್ರದಾಯಿಕವಾಗಿ ಮುಂದುವರಿಸಿಕೊಂಡು ಬರಲಾಗಿದೆ. ಮಾವುತರನ್ನು ಭೇಟಿಯಾಗಿ ಅವರ ಬೇಡಿಕೆ ಮತ್ತು ಅವಶ್ಯಕತೆಗಳನ್ನು ತಿಳಿಯಲು ಇದೊಂದು ಸದಾವಕಾಶ. ಅವರು ಬೇಡಿಕೆಗಳ ಬಗ್ಗೆ ನಮ್ಮೊಂದಿಗೆ ಚರ್ಚಿಸಿದ್ದಾರೆ ಎಂದು ಹೇಳಿದರು.

ಕಾವೇರಿ ಜಲ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್ ಇಂದು ತೀರ್ಪು ನೀಡಲಿದೆ. ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆಯಾಗಿದ್ದು, ರಾಜ್ಯದ ಜನರಿಗೆ ಕುಡಿಯುವ ನೀರಿನ ಕೊರತೆಯಿರುವುದರಿಂದ ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದು ನಿರ್ಣಯಿಸಿದ್ದೇವೆ. ಸುಪ್ರೀಂ ಕೋರ್ಟ್ ಏನು ತೀರ್ಪು ನೀಡುತ್ತದೆ ಎಂಬುದರ ಅರಿವು ನಮಗಿಲ್ಲ. ಹಾಗಾಗಿ ಕೋರ್ಟ್ ಏನೇ ತೀರ್ಪು ನೀಡಿದರೂ ಅದನ್ನು ಎದುರಿಸುವ ಅನಿವಾರ್ಯವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ನಿರ್ಧಾರ ತೆಗೆದುಕೊಂಡರೂ ನಾವು ಅವರೊಂದಿಗಿದ್ದೇವೆ ಎಂದು ಹೇಳಿದರು.
ರಾಜ್ಯದಲ್ಲಿರುವ ನೀರು ಮತ್ತು ಅಗತ್ಯವಿರುವ ನೀರಿನ ಬಗ್ಗೆ ರಾಜ್ಯ ಸರಕಾರ ವರದಿಯೊಂದನ್ನು ಸಿದ್ಧಪಡಿಸಿದೆ. ರಾಜ್ಯದ ವಕೀಲರು ಈ ಅಂಶಗಳನ್ನು ಕೋರ್ಟ್ ಮುಂದಿಡಲಿದ್ದಾರೆ. ಕಾವೇರಿ ನದಿಯ ಬಗ್ಗೆ ಮೂರನೆಯವರು ಅಧ್ಯಯನ ನಡೆಸುವ ಅಗತ್ಯವಿಲ್ಲ. ಕರ್ನಾಟಕದ ಪರವಾಗಿ ತೀರ್ಪು ಬರಲಿದೆ ಎನ್ನುವ ನಿರೀಕ್ಷೆಯಲ್ಲಿದ್ದೇವೆ. ಜಲಾಶಯದಲ್ಲಿರುವ ನೀರನ್ನು ಕೇವಲ ಕುಡಿಯಲು ಮಾತ್ರ ಬಳಸಲಾಗುವುದು ಎಂದು ಸಕ್ಕರೆ ಮತ್ತು ಸಹಕಾರ ಸಚಿವ ಮಹದೇವ ಪ್ರಸಾದ್ ಹೇಳಿದರು.

ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಸಕ್ಕರೆ ಮತ್ತು ಸಹಕಾರ ಸಚಿವ ಮಹದೇವ ಪ್ರಸಾದ್, ಉಪ ಆಯುಕ್ತ ಡಿ. ರಣ್‍ದೀಪ್, ಮೇಯರ್ ಬಿ.ಎಲ್. ಬೈರಪ್ಪ ಉಪಹಾರಕ್ಕೂ ಮೊದಲು ಮಾವುತರನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಆಲಿಸಿದರು.

 

 

 

 

Leave a Reply

comments

Tags

Related Articles

error: