ಕರ್ನಾಟಕ

ಮಗನ ಸಾವಿನ ದುಖಃದಲ್ಲೂ ಅಂಗಾಗ ದಾನ ಮಾಡಿ ಮಾನವೀಯತೆ ಮೆರೆದ ಪೋಷಕರು

ಬೆಂಗಳೂರು,ಜ.24-ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮೃತಪಟ್ಟ ಯುವಕನೊಬ್ಬ ಐವರಿಗೆ ಜೀವದಾನ ಮಾಡಿದ್ದಾನೆ. ಮಗನ ಸಾವಿನ ದುಖಃದಲ್ಲೂ ಮಗನ ಅಂಗಾಂಗಳನ್ನು ದಾನ ಮಾಡುವ ಮೂಲಕ ಪೋಷಕರು ಮಾನವೀಯತೆ ಮೆರೆದಿದ್ದಾರೆ.

ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿ ಎಸ್​.ಸುಜನ್ (21) ಅಪಘಾತದಲ್ಲಿ ಮೃತಪಟ್ಟ ಯುವಕ. ಸೃಜನ್ ದೊಡ್ಡಬಳ್ಳಾಪುರದ ಬಳಿ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಅಪಘಾತಕ್ಕೀಡಾಗಿದ್ದ. ಆತನನ್ನು ಕೊಲಂಬಿಯಾ ಏಷ್ಯಾದಲ್ಲಿ ದಾಖಲಿಸಲಾಗಿತ್ತು.

ಅಪಘಾತದಲ್ಲಿ ಸುಜನ್ ಮೆದುಳಿಗೆ ತೀವ್ರವಾಗಿ ಗಾಯವಾಗಿತ್ತು. ಹಲವು ಚಿಕಿತ್ಸೆ ನೀಡಿದರೂ ಪ್ರಯೋಜನವಾಗಿರಲಿಲ್ಲ. ಸುಜನ್ ಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಬಳಿಕ ಸುಜನ್ ಕೋಮಾಗೆ ಜಾರಿದ್ದ. ತೀವ್ರ ಚಿಕಿತ್ಸೆಯ ಬಳಿಕವೂ ಚೇತರಿಕೆ ಕಂಡುಬರದ ಹಿನ್ನಲೆಯಲ್ಲಿ ವೈದ್ಯರು ಮಿದುಳು ನಿಷ್ಕ್ರಿಯಗೊಂಡಿದೆ ಎಂದು ಘೋಷಿಸಿದ್ದರು.

ಮಗನ ಸಾವಿನ ದುಖಃದಲ್ಲೂ ಮಾನವೀಯತೆ ಮೆರೆದ ಸೃಜನ್ ತಂದೆ-ತಾಯಿ ಅಂಗಾಗ ದಾನ ಮಾಡಲು ಒಪ್ಪಿಗೆ ಸೂಚಿಸಿದರು. ಅದರಂತೆ ಸೃಜನ್ ಅಂಗಾಂಗಗಳನ್ನು ಕರ್ನಾಟಕದ ಕಸಿ ಪ್ರಾಧಿಕಾರ ಜೀವನ ಸಾರ್ಥಕತೆಯ ಪ್ರಕ್ರಿಯೆಯನ್ನು ಪ್ರಾರಂಭಿಸಿತು. ದಾನ ಮಾಡಲಾದ ಅಂಗಾಂಗಗಳು ಇದೀಗ ಐವರಿಗೆ ಜೀವ ನೀಡಿದೆ.

ಸುಜನ್​ನ ಒಂದು ಕಿಡ್ನಿಯನ್ನ ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ರೋಗಿಯೊಬ್ಬರಿಗೆ ಅಳವಡಿಸಲಾಗಿದೆ. ಸಕ್ರ ವರ್ಲ್ಡ್ ಆಸ್ಪತ್ರೆಯ ಮತ್ತೊಬ್ಬ ರೋಗಿಗೆ ಸುಜನ್​ನ ಮತ್ತೊಂದು ಕಿಡ್ನಿ ಮತ್ತು ಲಿವರ್ ಅನ್ನು ಅಳವಡಿಸಲಾಗಿದೆ. ಎರಡು ಕಾರ್ನಿಯಾಗಳನ್ನ ಮಿಂಟೋ ಕಣ್ಣಿನ ಆಸ್ಪತ್ರೆಗೆ ಹಸ್ತಾಂತರಿಸಲಾಗಿದೆ. (ಎಂ.ಎನ್)

Leave a Reply

comments

Related Articles

error: