ಮೈಸೂರು

ಕ್ಯೂಸಿಐನಿಂದ ಸ್ವಚ್ಛತಾ ಪ್ರಮಾಣಪತ್ರ ಸ್ವೀಕರಿಸಿದ ಎಮ್‍ಸಿಸಿ

ಮಂಗಳವಾರ ಟೌನ್‍ಹಾಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈಸೂರು ನಗರ ಪಾಲಿಕೆಯು ‘ಸ್ವಚ್ಛತಾ’ ಪ್ರಮಾಣಪತ್ರವನ್ನು ಸ್ವೀಕರಿಸಿತು.

ಭಾರತದ ಕ್ವಾಲಿಟಿ ಕೌನ್ಸಿಲ್‍ ನಡೆಸಿದ ಸರ್ವೆಯಲ್ಲಿ ಮೈಸೂರನ್ನು ಬಯಲು ಮುಕ್ತ ಶೌಚ(ಓಡಿಎಫ್) ನಗರ ಎಂದು ಘೋಷಿಸಿತ್ತು. ಮೊದಲಿಗೆ ಕ್ವಾಲಿಟಿ ಕೌನ್ಸಿಲ್ ಆಫ್ ಭಾರತದ ಅಭಿನವ್ ಯಾದವ್‍ರಿಂದ ಸ್ವಚ್ಛತಾ ಪ್ರಮಾಣಪತ್ರ ಸ್ವೀಕರಿಸಿತ್ತು.

ಎಚ್‍.ಸಿ. ಮಹದೇವಪ್ಪ ಮಾತನಾಡಿ, ಕ್ಯೂಸಿಐ ಮಾಡಿರುವ ಘೋಷಣೆಯಿಂದ ಮೈಸೂರಿನ ಕಿರೀಟಕ್ಕೊಂದು ಗರಿ ಸೇರಿದೆ. ಈಗಾಗಲೇ ಸತತ ಎರಡು ಬಾರಿ ಸ್ವಚ್ಛ ನಗರಿ ಎಂಬ ಬಿರುದು ಪಡೆದಿರುವ ನಾವು ಮುಂದಿನ ವರ್ಷಗಳಲ್ಲೂ ನಮ್ಮ ನಗರವನ್ನು ಇನ್ನಷ್ಟು ಸ್ವಚ್ಛವಾಗಿಟ್ಟು ಇತರ ನಗರಗಳಿಗೆ ಮಾದರಿಯಾಗಬೇಕು ಎಂದರು.

ಸೆ.30ರಂದು ನವದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಪ್ರಶಸ್ತಿಯನ್ನು ಮೈಸೂರು ಮಹಾನಗರ ಪಾಲಿಕೆಗೆ ಪ್ರದಾನ ಮಾಡಲಿದ್ದಾರೆ.

ಎಮ್‍ಸಿಸಿ ಆಯುಕ್ತ ಜಿ.ಜಗದೀಶ್, ಡಿಸಿ ರಣ್‍ದೀಪ್‍, ಉಪ ಮೇಯರ್ ವನಿತಾ ಪ್ರಸನ್ನ, ಶಾಸಕ ವಾಸು ಮತ್ತು ಇತರರು ಕಾರ್ಯಕ್ರಮದಲ್ಲಿದ್ದರು.

Leave a Reply

comments

Tags

Related Articles

error: