ಮೈಸೂರು

ಧಾನ್ ಫೌಂಡೇಶನ್ ಮೈಸೂರು ವಲಯ ವತಿಯಿಂದ ‘ಮಹಿಳಾ ಸಬಲೀಕರಣ’ ಕುರಿತು ವಾಕಥಾನ್ ಗೆ ಚಾಲನೆ

ಮೈಸೂರು,ಜ.25:- ಧಾನ್ ಫೌಂಡೇಶನ್ ಮೈಸೂರು ವಲಯ ವತಿಯಿಂದ ‘ಮಹಿಳಾ ಸಬಲೀಕರಣ’ ಕುರಿತು ವಾಕಥಾನ್ 2020 ನ್ನು ಹಮ್ಮಿಕೊಳ್ಳಲಾಗಿತ್ತು.

ಇಂದು ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಎದುರು ಅಡಿಶನಲ್ ಎಸ್ಪಿ ಸ್ನೇಹ ಜಾಥಾಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಧಾನ್ ಸಂಸ್ಥೆಯು ಮೈಸೂರು ವಲಯಕ್ಕೆ ಒಳಪಟ್ಟಮತೆ 1600ಸ್ವಸಹಾಯ ಗುಂಪುಗಳ 30ಸಾವಿರ ಮಹಿಳಾ ಸದಸ್ಯರನ್ನು ಹೊಂದಿದ್ದು, ಅವರಿಗೆ ಸಾಮಾಜಿಕ ಭದ್ರತೆ, ಆರ್ಥಿಕ ಸೌಲಭ್ಯ, ನಾಯಕತ್ವದ ಅವಕಾಶ, ಮಹಿಳೆಯರಿಗೆ ಕೌಶಲ್ಯ ತರಬೇತಿ ಮುಖಾಂತರ ಉದ್ಯೋಗ ಸೃಷ್ಟಿಯನ್ನು ಹಾಗೂ ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆಯನ್ನು ಪ್ರೇರೇಪಿಸಿ ಆದಾಯ ಮೂಲಗಳನ್ನು ಸೃಷ್ಟಿ ಮಾಡಿದೆ. ಪ್ರತಿಯೊಬ್ಬರಿಗೂ ಜೀವನೋಪಾಯಕ್ಕಾಗಿ ವಿವಿಧ ರೀತಿಯ ತರಬೇತಿಗಳನ್ನು ನೀಡುತ್ತಿದೆ. ಇದನ್ನು ಸಾರ್ವಜನಿಕರಿಗೆ ತಿಳಿಸುವ ಮುಖ್ಯ ಉದ್ದೇಶದಿಂದ ಹಾಗೂ ಧಾನ್ ಸಂಸ್ಥೆಯ ಸಾಮಾಜಿಕ ಕಾರ್ಯಕ್ರಮಗಳನ್ನು ಪರಿಚಯಿಸುವ ಉದ್ದೇಶದಿಂದ ವಾಕ್ ಥಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಧಾನ್ ಫೌಂಡೇಶನ್ ಮುಖ್ಯಸ್ಥರು ತಿಳಿಸಿದರು. ವಾಕ್ ಥಾನ್ ಉದ್ದಕ್ಕೂ ಡೊಳ್ಳು ಕುಣಿತ ಗಮನ ಸೆಳೆಯಿತು.

ವಾಕ್ ಥಾನ್ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಸಮಾಪ್ತಿಗೊಂಡಿತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: