ಪ್ರಮುಖ ಸುದ್ದಿಮೈಸೂರು

ಸಾಲ ತಂದಾದರೂ ನಾವು ರೈತರ ನೆರವಿಗೆ ನಿಲ್ಲುತ್ತೇವೆ, ರೈತರ ಬೆಳೆಗಳಿಗೆ ಬೆಂಬಲ ಬೆಲೆ ಕೊಟ್ಟು ರೈತರು ನೆಮ್ಮದಿಯಾಗಿ ಬದುಕುವ ರೀತಿ ಮಾಡುತ್ತೇನೆ : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಮೈಸೂರು,ಜ.27:- ಸಾಲ ತಂದಾದರೂ ನಾವು ರೈತರ ನೆರವಿಗೆ ನಿಲ್ಲುತ್ತೇವೆ. ರೈತರ ಬೆಳೆಗಳಿಗೆ ಬೆಂಬಲ ಬೆಲೆ ಕೊಟ್ಟು ರೈತರು ನೆಮ್ಮದಿಯಾಗಿ ಬದುಕುವ ರೀತಿ ಮಾಡುತ್ತೇನೆ. ರೈತರು ಕಣ್ಣೀರು ಹಾಕದಂತೆ ಮಾಡುತ್ತೇನೆ. ರೈತರು ನೆಮ್ಮದಿಯಾಗಿ ಬದುಕುವ ರೀತಿ ಮಾಡೇ ತೀರುತ್ತೇನೆ ಇದು ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸುತ್ತೂರು ಕ್ಷೇತ್ರದಲ್ಲಿ ನೀಡಿದ ವಾಗ್ದಾನ.

ನಿನ್ನೆ ಸುತ್ತೂರಿನಲ್ಲಿ ನಡೆದ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕೃಷಿ ಮೇಳ ಮತ್ತು ವಸ್ತು ಪ್ರದರ್ಶನದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು  ಮಾತನಾಡಿ   ಮಾರ್ಚ್ 5 ಮಂಡಿಸುವ ಬಜೆಟ್ ನಲ್ಲಿ ಯಾವ ಕ್ಷೇತ್ರಕ್ಕೆ ಅನುದಾನ ಕೊರತೆ ಆದ್ರೂ ಸರಿಯೆ. ಆದ್ರೆ ಕೃಷಿ ಕ್ಷೇತ್ರಕ್ಕೆ ಹಣಕಾಸಿನ ತೊಂದರೆ ಆಗದಂತೆ ಬಜೆಟ್ ಮಂಡನೆ ಮಾಡುತ್ತೇವೆ. ವಿಶೇಷ ಯೋಜನಗಳನ್ನು ಕೃಷಿ ಕ್ಷೇತ್ರಕ್ಕೆ ನೀಡುತ್ತೇನೆ ಎಂದರು. ರಾಜ್ಯದ ಬೊಕ್ಕಸ ಖಾಲಿ ಎಂಬ ಆರೋಪ ವಿಚಾರಕ್ಕೆ ಸಿದ್ದರಾಮಯ್ಯ ಗೆ ಸಿಎಂ ಯಡಿಯೂರಪ್ಪ ತಿರುಗೇಟು ನೀಡಿದ್ದು, ಸಿದ್ದರಾಮಯ್ಯನವರ ಎಲಾ ಪ್ರಶ್ನೆಗಳಿಗೆ ಈಗ ಉತ್ತರ ಕೊಡಲ್ಲ. ಮಾರ್ಚ್ 5 ರಂದು ಬಜೆಟ್ ಮಂಡಿಸುತ್ತೇನೆ. ಆಗ ಸಿದ್ದರಾಮಯ್ಯ ಪಶ್ನೆ ಮಾಡಲಿ. ನಾನು ಸದನದಲ್ಲೇ ಉತ್ತರ ಕೊಡುತ್ತೇನೆ ಎಂದರು.

ಸುಧಾಕರ್ ಸಚಿವರಾಗೋದನ್ನು ಕನ್ಪರ್ಮ್ಸ್ ಮಾಡಿದ ಸಿಎಂ ಯಡಿಯೂರಪ್ಪ ಭಾಷಣದ ಆರಂಭದಲ್ಲಿ ಮುಂದಿನ ಸಚಿವರಾಗುವ ಸುಧಾಕರ್ ಎಂದು ಭಾಷಣ ಆರಂಭಿಸಿದ್ದು, ಸಚಿವ ಸಂಪುಟದಲ್ಲಿ ಸುಧಾಕರ್ ಗೆ ಸಚಿವ ಸ್ಥಾನ ಖಾತ್ರಿ ಪಡಿಸಿದರು. ಮುಂದಿನ ಸಚಿವ ಸುಧಾಕರ್ ಎನ್ನುತ್ತಿದ್ದಂತೆ ಶಾಸಕ ಡಾ.ಸುಧಾಕರ್ ನಗು ಬೀರಿದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಾಲುಮರದ ತಿಮ್ಮಕ್ಕರಿಗೆ 2 ಕೋಟಿ ರೂ ನೀಡಿದೆ. ಕಾನೂನಾತ್ಮಕವಾಗಿ ತೆರಿಗೆ ಹಿಡಿದು ಅವ್ರ ಖಾತೆಗೆ ಹಣ ಜಮಾ ಆಗಿದೆ. ಬೆಂಗಳೂರಿನಲ್ಲಿ 50 ಲಕ್ಷ ರೂ. ನ ವಸತಿ ನೀಡಲಾಗಿದೆ ಎಂದರು.

ದಾವೋಸ್ ಪ್ರವಾಸದಿಂದ ಕೈಗಾರಿಕಾಭಿವೃದ್ಧಿಗೆ ಸಹಕಾರಿಯಾಗಲಿದೆ  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.  ಎಸ್.ಎಂ.ಕೃಷ್ಣ ಅವರು ದಾವೋಸ್ ಪ್ರವಾಸ ಮಾಡಿದ್ದರು.  ಅನಂತರ ಯಾರೂ ಹೋಗಿರಲಿಲ್ಲ.‌ 16 ವರ್ಷಗಳ ನಂತರ ದಾವೋಸ್‌ಗೆ ಹೋಗಿ ಬಂದಿದ್ದೇನೆ. ಸುಮಾರು 40 ಕೈಗಾರಿಕೋದ್ಯಮಿಗಳೊಂದಿಗೆ ಚರ್ಚೆ ಮಾಡಿದ್ದೇನೆ.  ಬೆಂಗಳೂರು, ಮೈಸೂರು ಹೊರತುಪಡಿಸಿ ರಾಜ್ಯದ ಇತರೆಡೆ ಕೈಗಾರಿಕೆಗಳು ಬರಬೇಕು.  ಯುವಕರಿಗೆ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗಬೇಕು. ರಾಜ್ಯದಲ್ಲಿ ಕೈಗಾರಿಕೆಗಳಿಗೆ ಬಂಡವಾಳ ಹೂಡಿಕೆಗೆ ಪ್ರಮುಖ ಒಪ್ಪಂದ ಆಗಿದೆ. ಭವಿಷ್ಯದಲ್ಲಿ ಅವರ ಜತೆ ನಿಕಟ ಸಂಪರ್ಕ ಇಟ್ಟುಕೊಂಡು ಬಂಡವಾಳ ಹೂಡಿಕೆ ಮಾಡಿಸುತ್ತೇವೆ. ಇದು ಅತ್ಯಂತ ಫಲಪ್ರದಾಯ ವಿದೇಶ ಪ್ರವಾಸ ಎಂದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ ಯಡಿಯೂರಪ್ಪ ಮುಖ್ಯ ಮಂತ್ರಿ ಆದಾಗ ಬಹು ದೊಡ್ಡ ಮಳೆ ಆಯ್ತು. ಯಡಿಯೂರಪ್ಪ ಅಧಿಕಾರ ಹಿಡಿದ ರಾಜ್ಯದಲ್ಲಿ ಸಂವೃದ್ಧಿಯ ಮಳೆ ಆಗುತ್ತೆ‌. ರೈತರು ಸಂತೋಷದಿಂದ ಇರುವಂತ ಕಾಲ ಸೃಷ್ಟಿ ಆಗುತ್ತೆ. ರೈತರಿಗೆ ಸುಲಭವಾಗಿ ಮತ್ತು ಉಚಿತವಾಗಿ ಪಹಣಿ ಸಿಗುವಂತ ವ್ಯವಸ್ಥೆಯನ್ನು ಸಿಎಂ ಯಡಿಯೂರಪ್ಪ ಮಾಡಬೇಕು ಎಂದು ವೇದಿಕೆಯಲ್ಲಿ ಮನವಿ ಮಾಡಿದರು.

ಸಚಿವ ವಿ.ಸೋಮಣ್ಣ ಮಾತನಾಡಿ ಯಡಿಯೂರಪ್ಪ ಮೇಲೆ ಎಲ್ಲಾ ನಾಯಕರಿಗೆ ನಂಬಿಕೆ ಇದೆ. ಕೊಟ್ಟ ಮಾತಿನಂತೆ   ನಡೆದು ಕೊಂಡಿದ್ದಾರೆ. ಮೈಸೂರು ಸಾಂಸ್ಕೃತಿಕ ರಾಜಧಾನಿ. ಯಡಿಯೂರಪ್ಪ ಸರ್ಕಾರ ನಿಂತ ನೀರಲ್ಲ ಹರಿಯುವ ನೀರು. ಮೂರು ವರ್ಷಗಳ ಕಾಲ ಯಡಿಯೂರಪ್ಪ ಅವ್ರೆ ಸಿಎಂ ಆಗಿರಬೇಕು ಎಂದರು.

ಸುತ್ತೂರು ಜಾತ್ರೆಯಲ್ಲಿ ಬಿ.ವೈ.ವಿಜಯೇಂದ್ರ ಪರ ಪ್ರಚಾರ ಮಾಡಿದ ಸಚಿವ‌ ವಿ.ಸೋಮಣ್ಣ. ಅದೃಷ್ಟ ಯಾರಪ್ಪನ ಮನೆಯ ಸ್ವತ್ತು ಅಲ್ಲ. ವಿಜಯೇಂದ್ರ ಮುಂದೆ ಏನಾಗುತ್ತಾರೆ ಅಂತ ಯಾರಿಗೂ ಗೊತ್ತಿಲ್ಲ.  ಈ ಕ್ಷೇತ್ರದ ಆಶೀರ್ವಾದ ಬೇಕು.  ಸುತ್ತೂರು ಸ್ವಾಮೀಜಿ ಅವರಂತಹ ಆಶೀರ್ವಾದ ಬೇಕು ಎಂದರು.

ಇದೇ ಸಂದರ್ಭದಲ್ಲಿ ಸಾಲು ಮರದ ತಿಮ್ಮಕ್ಕ ಅವರನ್ನು ಮುಖ್ಯಮಂತ್ರಿಗಳು ಸನ್ಮಾನಿಸಿದರು. ಈ ಸಂದರ್ಭ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶಾಸಕ ಯತೀಂದ್ರ, ಬಿ ವೈ ವಿಜಯೇಂದ್ರ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: