ಮೈಸೂರು

ಸಚಿವ ಸಂಪುಟ ವಿಸ್ತರಣೆ ವಿಚಾರ : 17 ಮಂದಿ ಪರ ಸಂಸದ ಶ್ರೀ‌ನಿವಾಸ್ ಪ್ರಸಾದ್ ಬ್ಯಾಟಿಂಗ್

ಮೈಸೂರು,ಜ.27:- ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಪಟ್ಟಂತೆ 17 ಮಂದಿ ಪರ ಸಂಸದ ಶ್ರೀ‌ನಿವಾಸ್ ಪ್ರಸಾದ್ ಬ್ಯಾಟಿಂಗ್ ಮಾಡಿದ್ದಾರೆ.

ಮೈಸೂರಿನಲ್ಲಿ ನಿನ್ನೆ ಮಾಧ್ಯಮಗಳೊಂದಿಗೆ ಮಾತನಾಡಿ ನಾನು ಹಿಂದೆ ಹೇಳಿದ್ದ ಮಾತಿಗೆ ಬದ್ಧ. ಇನ್ನೆರಡು ಮೂರು ದಿನದಲ್ಲಿ ಸಚಿವ ಸಂಪುಟ ರಚನೆ ಆಗುತ್ತೆ. ಈಗಾಗಲೇ ನಾನು ಮಾತನಾಡಿದ್ದೇನೆ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಬೇಗ ಸಚಿವ ಸಂಪುಟ ರಚನೆ ಮಾಡಿ ಅಂತ‌ ಹೇಳಿದ್ದೇನೆ. ನಾನು ಹಿಂದೆ ಹೇಳಿದ್ದ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ ಎಂದು ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.

ಸರ್ಕಾರ ರಚನೆ ಆಗಲು ಕಾರಣರಾದ 17 ಜನರಿಗೆ ಸ್ಥಾನ ನೀಡಬೇಕು‌. ಈ ಬಗ್ಗೆ ನಾನು ಮತ್ತೆ ಮತ್ತೆ ಮಾತನಾಡುವುದಿಲ್ಲ ಎಂದಿದ್ದಾರೆ.   (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: