ಮೈಸೂರು

ನೌಕರರ ಮುಂಬಡ್ತಿ ವಿಚಾರವಾಗಿ ನೀಡಿರುವ ತೀರ್ಪನ್ನು ಮತ್ತೊಮ್ಮೆ ಪರಿಶೀಲಿಸಿ

ಸರ್ವೋಚ್ಛ ನ್ಯಾಯಾಲಯವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನೌಕರರ ಮುಂಬಡ್ತಿ ವಿಚಾರವಾಗಿ ನೀಡಿರುವ ತೀರ್ಪನ್ನು ಮತ್ತೊಮ್ಮೆ ಪರಿಶೀಲಿಸುವ ಅಗತ್ಯವಿದೆ ಎಂದು ಕಾಂಗ್ರೆಸ್ ಮುಖಂಡ ಬಿ.ಎಂ.ಮಹೇಂದ್ರ ಕುಮಾರ್ ತಿಳಿಸಿದರು.
ಮೈಸೂರಿನ ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ದೇವರಾಜ ಅರಸುರವರು ಸಾಮಾಜಿಕ ನ್ಯಾಯ ಕಾಪಾಡಲು 39 ವರ್ಷಗಳ ಹಿಂದೆಯೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ  ಬಡ್ತಿಯಲ್ಲಿ ಮೀಸಲಾತಿ ನೀಡಿದ್ದರು. ಇದನ್ನು ಮುಂದುವರಿಸುವಂತೆ ಆಗ್ರಹಿಸಿದರು. ಇದು ಅವರ ಏಳಿಗೆಗೆ ತಂದ ಕ್ರಾಂತಿಕಾರಕ ಸುಧಾರಣೆಯಾಗಿದ್ದು, ಅದರ ಮರುಪರಿಶೀಲನೆ ಮಾಡಬೇಕೆಂದು ಕೋರಿದರು.
ಸುದ್ದಿಗೋಷ್ಠಿಯಲ್ಲಿ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ವೇದಿಕೆ ಮಾಜಿ ಅಧ್ಯಕ್ಷ ಪಿ.ಜಯರಾಜ ಹೆಗ್ಡೆ, ಸತೀಶ್, ನಾಗರಾಜು, ಸಿದ್ದಶೆಟ್ಟಿ ಉಪಸ್ಥಿತರಿದ್ದರು.  (ಎಲ್.ಜಿ-ಎಸ್.ಎಚ್)

Leave a Reply

comments

Related Articles

error: